ಬುಧವಾರ, ಆಗಸ್ಟ್ 17, 2022
25 °C

₹200 ಕೋಟಿ ಗಳಿಕೆ ದಾಖಲಿಸಿದ ‘ಮಾಸ್ಟರ್‌‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯ್‌ ಮತ್ತು ವಿಜಯ್‌ ಸೇತುಪತಿ ನಟನೆಯ ಮಾಸ್ಟರ್‌ ಚಿತ್ರದ ವಿಶ್ವದಾದ್ಯಂತ ಪ್ರದರ್ಶನದ ಗಳಿಕೆ ₹ 200 ಕೋಟಿ ತಲುಪಿದೆ. ಚಿತ್ರ ಮಂದಿರಗಳಲ್ಲಿ ಶೇ 50ರಷ್ಟು ಆಸನ ಭರ್ತಿಗೆ ಅವಕಾಶ ಇದ್ದರೂ ಈ ಚಿತ್ರ ಉತ್ತಮ ಗಳಿಕೆ ಮಾಡಿರುವುದು ಸ್ವತಃ ಚಿತ್ರ ತಂಡಕ್ಕೇ ಬೆರುಗು ಮೂಡಿಸಿದೆ. ಈ ರೀತಿಯ ಸ್ಪಂದನ ನಿರೀಕ್ಷಿಸಿರಲಿಲ್ಲವಂತೆ. ಅಂದಹಾಗೆ ಈ ಚಿತ್ರ ತಮಿಳುನಾಡೊಂದರಲ್ಲೇ ₹ 100 ಕೋಟಿ ಗಳಿಸಿದೆ.

ಲೋಕೇಶ್ ಕನಕರಾಜ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಜನಿಕಾಂತ್‌, ತಳಾ ಅಜಿತ್ ಅವರ ಚಿತ್ರಗಳ ದಾಖಲೆಯನ್ನು ಸರಿಗಟ್ಟುತ್ತದೆ ಎಂದು ಕಾಲಿವುಡ್‌ನಲ್ಲಿ ಚರ್ಚೆಗಳು ಶುರುವಾಗಿವೆ.

ದಳಪತಿ ವಿಜಯ್ ಅವರ ಬಿಗಿಲ್‌, ಮೆರ್ಸಲ್‌, ಮತ್ತು ಸರ್ಕಾರ್‌ ಚಿತ್ರಗಳೂ ಕೂಡಾ ಭರ್ಜರಿ ಯಶಸ್ಸು ದಾಖಲಿಸಿದ್ದವು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಾಸ್ಟರ್‌ ಚಿತ್ರ ₹13 ಕೋಟಿ ಗಳಿಸಿ ಬ್ಲಾಕ್‌ಬಸ್ಟರ್‌ ಎನಿಸಿಕೊಂಡಿದೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು