ಗುರುವಾರ , ಜನವರಿ 23, 2020
28 °C

ಕಾಪಿ ಹೊಡೆದ ತಮಿಳು ‘ಮಾಸ್ಟರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳು ನಟ ವಿಜಯ್‌ ಈಗ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ಮಾಸ್ಟರ್‌’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಎರಡನೇ ಹಂತದ ಚಿತ್ರೀಕರಣವು ಮುಂದಿನ ವಾರದಲ್ಲಿ ಚೆನ್ನೈ ಸ್ಟುಡಿಯೋದಲ್ಲಿ ನಡೆಯಲಿದೆ.

 ‘ಮಾಸ್ಟರ್‌‘ ಸಿನಿಮಾ ಕತೆ ಬಗ್ಗೆ ನಾನಾ ವರದಿಗಳು ಹರಿದಾಡುತ್ತಿವೆ. ಇದು ಸ್ವಮೇಕ್‌ ಚಿತ್ರವಲ್ಲ, ಕೊರಿಯನ್‌ ಸಿನಿಮಾ ‘ಸೈಲೆನ್ಸ್ಡ್‌’ದಿಂದ ಸ್ಫೂರ್ತಿ ಪಡೆಯಲಾಗಿದೆ ಎಂದು ಗಾಳಿ ಸುದ್ದಿ ಇದೆ.

2011ರಲ್ಲಿ ಬಿಡುಗಡೆಯಾಗಿದ್ದ ಸೈಲೆನ್ಸ್ಡ್‌ ಸಿನಿಮಾ ಕ್ರಾಂತಿಕಾರಿ ಸಿನಿಮಾಗಳ ಪಟ್ಟಿಗೆ ಸೇರಿಕೊಂಡಿದೆ. ಶಾಲಾ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಹಾಗೂ ದೈಹಿಕ ಕಿರುಕುಳದ ವಿರುದ್ಧ ಶಿಕ್ಷಕನೊಬ್ಬ ನಡೆಸುವ ಹೋರಾಟದ ಕತೆಯನ್ನು ಹೊಂದಿದೆ. ‘ಮಾಸ್ಟರ್‌’ ಚಿತ್ರದಲ್ಲೂ ನಟ ವಿಜಯ್‌ ಕಾಲೇಜು ಪ್ರಾಧ್ಯಾಪಕರ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಎರಡೂ ಸಿನಿಮಾಗಳ ಕತೆಯಲ್ಲಿ ಕೊಂಚ ಸಾಮ್ಯತೆ ಕಾಣುತ್ತಿದೆ.

ಆದರೆ ಮಾಸ್ಟರ್‌ ಸಿನಿಮಾದ ತಂಡವು ಈ ವಾದವನ್ನು ತಳ್ಳಿ ಹಾಕಿದೆ. ಇದೆಲ್ಲಾ ಸುಳ್ಳುಸುದ್ದಿ. ಮಾಸ್ಟರ್‌ಗೆ ಕೊರಿಯನ್‌ ಸಿನಿಮಾದ ಸ್ಫೂರ್ತಿ ಅಲ್ಲ ಎಂದು ಸ್ಪಷ್ಟನೆ ನೀಡಿದೆ. ನಿರ್ದೇಶಕ ಲೋಕೆಶ್‌ ಕನಕರಾಜ್‌ ಅವರು ನಟ ವಿಜಯ್‌ಗಾಗಿ ತಾಜಾ ಕತೆ ತಯಾರು ಮಾಡಿದ್ದಾರೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ.  ಆದರೆ ‘ಮಾಸ್ಟರ್‌’ ಸಿನಿಮಾ ನಿರ್ದೇಶಕರಾಗಲೀ, ನಿರ್ಮಾಪಕರಾಗಲೀ ತುಟಿ ಬಿಚ್ಚಿಲ್ಲ.

ಹೊಸ ವರ್ಷದ ಆರಂಭದಲ್ಲಿ ಈ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ವಿಜಯ್‌, ವಿಜಯ್‌ ಸೇತುಪತಿ, ಮಾಳವಿಕಾ ಮೋಹನನ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು