ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಕ್ರಮ್ ವೇದ’ ಟೀಸರ್: ಭರವಸೆ ಮೂಡಿಸಿದ ಹೃತಿಕ್‌, ಸೈಫ್‌ ಆಲಿಖಾನ್‌

Last Updated 25 ಆಗಸ್ಟ್ 2022, 7:54 IST
ಅಕ್ಷರ ಗಾತ್ರ

ನಟ ಹೃತಿಕ್ ರೋಷನ್ ಮತ್ತು ನಟ ಸೈಫ್ ಆಲಿಖಾನ್ ಅಭಿನಯದ ವಿಕ್ರಮ್ ವೇದ ಸಿನಿಮಾ ಟೀಸರ್ ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದೆ.

ಬಾಲಿವುಡ್‌ ನಟರಾದ ಹೃತಿಕ್ ರೋಷನ್ ಮತ್ತು ಸೈಫ್ ಆಲಿ ಖಾನ್ ಅಭಿನಯದ ವಿಕ್ರಮ್ ವೇದ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಯುಟ್ಯೂಬ್‌ನಲ್ಲಿ ಟೀಸರ್ ಬಿಡುಗಡೆ ಆಗಿ ಕೆಲವೇ ಗಂಟೆಗಳಲ್ಲಿ 1.61ಕೋಟಿಗೂಅಧಿಕ ವೀಕ್ಷಣೆ ಕಂಡಿದೆ. ಟೀಸರ್ 1 ನಿಮಿಷ ಮತ್ತು 54 ಸೆಕೆಂಡ್‌ ಇದ್ದು ದರೋಡೆಕೋರನನ್ನು ಪತ್ತೆಹಚ್ಚಲು ಪೊಲೀಸ್ ಅಧಿಕಾರಿಯಾದ ಸೈಫ್ ಆಲಿ ಖಾನ್ ಹೋಗುತ್ತಾರೆ. ದರೋಡೆಕೋರನ ಪಾತ್ರವನ್ನು ಹೃತಿಕ್ ರೋಷನ್ ನಿರ್ವಹಿಸಿದ್ದಾರೆ.

ವಿಕ್ರಮ್ ವೇದ ತಮಿಳು ಚಿತ್ರದ ಹಿಂದಿ ರಿಮೇಕ್. ಮೂಲ ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸೆಪ್ಟೆಂಬರ್ 30ರಂದು ಈ ಸಿನಿಮಾದೇಶದಾದ್ಯಂತಚಿತ್ರಮಂದಿರಗಳಲ್ಲಿಬಿಡುಗಡೆಯಾಗಲಿದೆ.

ಹೃತಿಕ್‌, ಸೈಫ್‌ ಆಲಿಖಾನ್‌ ಸಿನಿಮಾಗಳ ಬಾಯ್ಕಾಟ್‌ ಬಿಸಿಯ ಮಧ್ಯೆ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT