‘ಅಂದೊಂದಿತ್ತು ಕಾಲ’ದತ್ತ ವಿನಯ್ ರಾಜ್ಕುಮಾರ್

ಬೆಂಗಳೂರು: ನಟ ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಪುತ್ರರಾದ ನಟ ವಿನಯ್ ರಾಜ್ಕುಮಾರ್ ಹಾಗೂ ಅದಿತಿ ಪ್ರಭುದೇವ ತಾರಾಗಣದ ನೂತನ ಚಿತ್ರಕ್ಕೆ ‘ಅಂದೊಂದಿತ್ತು ಕಾಲ’ ಎಂದು ಶುಕ್ರವಾರ ಶೀರ್ಷಿಕೆ ಇಡಲಾಗಿದೆ.
ಶೀರ್ಷಿಕೆ ಪೋಸ್ಟರ್ನಲ್ಲಿ ‘ಹೃದಯದ ತುಂಬಾ ಅಳುವಿದೆ, ನಗುವಷ್ಟು ಅದೃಷ್ಟವಂತನಲ್ಲ. ಮರೆಯಾದ ನಗುವಿನಲ್ಲಿ ನಗುವಿಲ್ಲದ ನೋವಿನಲ್ಲಿ ನಾ ನಿನ್ನ ಸೆರೆಯಾಗುವೆ.. ಓ ಬಾಲ್ಯವೇ ನೀ ಮತ್ತೆ ಬಂದುಬಿಡು, ನನ್ನ ಮತ್ತೆ ಮಗುವಾಗಿಸು–ಕುಮಾರ’ ಎಂಬ ಉಲ್ಲೇಖವಿದ್ದು, ಚಿತ್ರಕಥೆ ಏನಿರಬಹುದು ಎಂಬ ಕುತೂಹಲ ಮೂಡಿಸಿದೆ. ಕೀರ್ತಿ ಅವರು ರಚಿಸಿ, ನಿರ್ದೇಶಿಸಿರುವ ಈ ಚಿತ್ರವನ್ನು ಭುವನ್, ಲೋಕೇಶ್.ಎನ್, ಶಿವಣ್ಣ ಎಸ್ ನಿರ್ಮಿಸಿದ್ದಾರೆ. ಅಭಿಷೇಕ್ ಜಿ.ಕಾಸರಗೋಡು ಅವರ ಛಾಯಾಗ್ರಹಣವಿದ್ದು, ರಾಘವೇಂದ್ರ ವಿ. ಸಂಗೀತ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.