ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಟೀಂ–ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೂ ಒಬ್ಬರು. ಅನುಷ್ಕಾ ನಟಿಸಿರುವ ಎಲ್ಲ ಚಿತ್ರಗಳನ್ನು ತಪ್ಪದೇ ನೋಡುತ್ತಾರಂತೆ ವಿರಾಟ್. ಅನುಷ್ಕಾ ಅಭಿನಯದ ಚಿತ್ರಗಳ ಪೈಕಿ ತಮಗೆ ತುಂಬ ಇಷ್ಟವಾದ ಚಿತ್ರ ಯಾವುದೆಂದು ಕ್ಯಾಪ್ಟನ್ ಇಂಡಿಯಾ ಬಹಿರಂಗ ಪಡಿಸಿದ್ದಾರೆ.

'ಇಂಡಿಯಾ ಟುಡೇ' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ಅವರಿಗೆ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರವು ತೀರಾ ಆಪ್ತವಾಗಿದೆಯಂತೆ. ಈ ಚಿತ್ರದಲ್ಲಿನ ಅನುಷ್ಕಾ ನಟನೆಯ ಆಯ್ದ ಭಾಗಗಳನ್ನು ಯುಟ್ಯೂಬ್‌ನಲ್ಲಿ ಮತ್ತೆ ಮತ್ತೆ ನೋಡುತ್ತಾರಂತೆ ವಿರಾಟ್ ಕೊಹ್ಲಿ.

‘ಏ ದಿಲ್ಹೈ ಮುಷ್ಕಿಲ್ ಚಿತ್ರವು ನನಗೆ ಆಪ್ತವಾಗಿದೆ. ಆ ಚಿತ್ರದಲ್ಲಿನ ಅನುಷ್ಕಾ ಪಾತ್ರವು ನನ್ನ ಅತ್ಯಂತ ನೆಚ್ಚಿನ ಪಾತ್ರವಾಗಿದೆ. ಆ ಬಗ್ಗೆ ನಾನು ಅವಳಿಗೆ ಈಗಲು ಹೇಳುತ್ತಿರುತ್ತೇನೆ. ಆ ಚಿತ್ರದಲ್ಲಿ ಅನುಷ್ಕಾಳಿಗೆ ಕ್ಯಾನ್ಸರ್ ಬರುತ್ತದೆ. ಅವಳಿಂದ ದೂರವಾಗಿದ್ದ, ರಣಬೀರ್ ಕಪೂರ್ ಮರಳಿ ಬರುತ್ತಾನೆ. ಆ ಸಂದರ್ಭದಲ್ಲಿ ಬರುವ ಹಾಡು ನನ್ನ ಹೃದಯವನ್ನು ಯಾವಾಗಲೂ ಕೊರೆಯುತ್ತದೆ. ಅದೂ ನನ್ನ ಹೃದಯ ಬಿಟ್ಟು ಎಲ್ಲೂ ಹೋಗಿಲ್ಲ,’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

‘ಏ ದಿಲ್ ಹೈ ಮುಷ್ಕಿಲ್’ಚಿತ್ರಕ್ಕೆ ಅನುಷ್ಕಾ ಶರ್ಮಾ, ರಣಬೀರ್ ಕಪೂರ್ ಮತ್ತು ಐಶ್ವರ್ಯ ರೈ ಅವರ ತಾರಾಗಣವಿದೆ. ಅದನ್ನು ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಚಿತ್ರವು ಉತ್ತಮ ಪ್ರದರ್ಶನ ಕಂಡು, 237.56 ಕೋಟಿ ರು. ಗಳಿಕೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.