ಗುರುವಾರ , ಸೆಪ್ಟೆಂಬರ್ 23, 2021
26 °C

ಪಾಕ್ ನಟಿ ಸಬಾಗೆ ಬಂಧನ ವಾರಂಟ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್‌ ನಟಿ ಸಬಾ ಖಮರ್‌ ವಿರುದ್ಧ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿದೆ.

ಲಾಹೋರ್‌ನ ಐತಿಹಾಸಿಕ ಮಸೀದಿಯ ಮುಂದೆ ವಿಡಿಯೊ ಸಾಂಗ್‌ ಚಿತ್ರೀಕರಣ ಮಾಡಿರುವುದಕ್ಕೆ ನಟಿ ಹಾಗೂ ವಿಡಿಯೊ ಸಾಂಗ್‌ ನಿರ್ಮಾಣ ಮಾಡಿದ್ದ ಬಿಬಲ್‌ ವಿರುದ್ಧ ಬಂಧನ ವಾರಂಟ್‌ ಹೊರಡಿಸಲಾಗಿದೆ.

ನ್ಯಾಯಾಲಯ ಹಲವು ದಿನಗಳ ಹಿಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರೂ ಸಭಾ ಮತ್ತು ಬಿಬಲ್‌ ಹಾಜರಾಗಿರಲಿಲ್ಲ ಈ ಹಿನ್ನೆಲೆಯಲ್ಲಿ ಅವರಿಗೆ ಬಂಧನ ವಾರಂಟ್‌ ಹೊರಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಡಿಯೊ ಸಾಂಗ್‌ ವಿವಾದ ಕುರಿತಂತೆ ಸಭಾ ಮತ್ತು ಬಿಬಲ್‌ ಈ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಮೆ ಕೋರಿದ್ದರು.

ಸಬಾ ಖಮರ್‌ ಬಾಲಿವುಡ್‌ನಲ್ಲಿ ’ಹಿಂದಿ ಮೀಡಿಯಂ’ ಸಿನಿಮಾದಲ್ಲಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು