ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಆಟೋ ಓಡಿಸುವುದರಲ್ಲೂ ಸೈ ಎಂದ ಸಲ್ಮಾನ್‌ ಖಾನ್‌ 

Last Updated 29 ಡಿಸೆಂಬರ್ 2021, 12:36 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಅವರು ಆಟೋ ಓಡಿಸಿರುವ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

ಮಹಾರಾಷ್ಟ್ರದ ರಾಯಘಡ್​ ಜಿಲ್ಲೆಯಲ್ಲಿರುವ ಪನ್ವೇಲ್​ನಲ್ಲಿ ಸಲ್ಮಾನ್​ ಖಾನ್​ ಅವರು ಫಾರ್ಮ್​ಹೌಸ್​ ಹೊಂದಿದ್ದಾರೆ. ಎರಡು ದಿನಗಳ ಹಿಂದೆ ಇಲ್ಲಿಯೇ ಜನ್ಮದಿನ ಆಚರಿಸಿಕೊಂಡಿದ್ದರು. ಹಾಗೇ ಬಾಲಿವುಡ್‌ ಗಣ್ಯರು, ಆಪ್ತರು, ಗೆಳೆಯರಿಗೆ ಭರ್ಜರಿ ಪಾರ್ಟಿ ಕೊಟ್ಟಿದ್ದರು.

ರಾಯಘಡ್‌ ನಗರದಲ್ಲಿ ರಾತ್ರಿ ವೇಳೆಯಲ್ಲಿ ಸ್ಥಳೀಯಆಟೋ ಚಾಲಕನ ಕಡೆಯಿಂದ ಆಟೋ ಪಡೆದು ಚಾಲನೆ ಮಾಡಿದ್ದಾರೆ. ಇದನ್ನು ಅಭಿಮಾನಿಯೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಮ್ಮ ಬಾಸು ಕಾರು ಮಾತ್ರವಲ್ಲ, ಆಟೋ ಓಡಿಸುವುದರಲ್ಲಿ ಸೈ’ ಕಾಮೆಂಟ್‌ ಮಾಡುತ್ತಿದ್ದಾರೆ.

ಸಲ್ಮಾನ್‌ ಅವರಿಗೆ ಜನ್ಮದಿನದ ಹಿಂದಿನ ದಿನ ಹಾವು ಕಚ್ಚಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT