ಈ ವಾರ ತೆರೆಗೆ ಬರುವ ಚಿತ್ರಗಳು

ಹೈಪರ್
ಎಂ.ಬಿಗ್ ಪಿಕ್ಚರ್ಸ್ ಲಾಂಛನದಲ್ಲಿ ಎಂ. ಕಾರ್ತಿಕ್ ಅವರು ನಿರ್ಮಿಸಿರುವ ಚಿತ್ರ ‘ಹೈಪರ್’. ಈ ಚಿತ್ರವನ್ನು ಗಣೇಶ್ ವಿನಾಯಕ್ ನಿರ್ದೇಶಿಸಿದ್ದಾರೆ.
ಡಿ. ಇಮಾನ್ ಸಂಗೀತ ನೀಡಿದ್ದಾರೆ. ಶಕ್ತಿವೇಲ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎ.ಪಿ. ಅರ್ಜುನ್, ಚೇತನ್, ದಿಲ್‍ವಾಲ ಅನಿಲ್ ಹಾಗೂ ಗೌಸ್‌ಫೀರ್ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಆರ್ಯ ಈ ಚಿತ್ರದ ನಾಯಕ. ಶೀಲಾ, ರಂಗಾಯಣ ರಘು, ಶೋಭರಾಜ್, ಬುಲೆಟ್ ಪ್ರಕಾಶ್, ಅಚ್ಯುತ ಕುಮಾರ್, ಶ್ರೀನಿವಾಸ ಪ್ರಭು, ಬ್ಯಾಂಕ್ ಜನಾರ್ದನ್, ವೀಣಾ ಸುಂದರ್, ಲಕ್ಷ್ಮೀ ಸಿದ್ದಯ್ಯ, ಉಮೇಶ್ ಪುಂಗ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕುಲ್ಫಿ
ಎ. ಎಂ. ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ಮುನಿಸ್ವಾಮಿ ಎಸ್.ಡಿ. ನಿರ್ಮಿಸಿರುವ ಚಿತ್ರ ‘ಕುಲ್ಫಿ’. ಮಂಜು ಹಾಸನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ನರಸಿಂಹಮೂರ್ತಿ ಛಾಯಾಗ್ರಹಣವಿದೆ. ಅಭಿಷೇಕ್ ಸಂಗೀತ ನಿರ್ದೇಶಿಸಿದ್ದಾರೆ. ತಾರಾಬಳಗದಲ್ಲಿ ಸಿನೋಲ್, ದಿಲೀಪ್, ಗಿರೀಶ್, ಲಾರೆನ್ಸ್, ರಮೇಶ್ ಭಟ್, ಬಿರಾದಾರ್ ಇದ್ದಾರೆ.
*121#
ನೇಕಾರ ಸಿನಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಕಿರಣ್‍ಕುಮಾರ್ ಟಿ.ಎಂ. ನಿರ್ಮಿಸಿರುವ ಚಿತ್ರ *121#. ದೋಸ್ತಿ ಆನಂದ್ ಕಥೆ ಬರೆದು ನಿರ್ದೇಶಿಸಿರುವುದರ ಜತೆಗೆ ಸಂಕಲನವನ್ನೂ ಮಾಡಿದ್ದಾರೆ. ದೋಸ್ತಿ ಆನಂದ್ ಹಾಗೂ ಸೋಮು ಹೊಯ್ಸಳ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಜಾಧವ್ ಹಾಗೂ ರಾಘವೇಂದ್ರ ವಿ. ಸಂಗೀತ ನಿರ್ದೇಶನ ಹಾಗೂ ಕಾರ್ತಿಕ್ ಮಳ್ಳೂರ್ ಛಾಯಾಗ್ರಹಣ ಚಿತ್ರಕ್ಕಿದೆ. ವಿನಯ್ ಚಂದರ್, ವಿದ್ಯಾ, ನವೀನ್, ಪವನ್, ಉಗ್ರಂ ಮಂಜು, ಸ್ವಾತಿ ತಾರಾಗಣದಲ್ಲಿದ್ದಾರೆ.
ಚಿಟ್ಟೆ
ಎಂ.ಎಲ್. ಪ್ರಸನ್ನ ನಿರ್ದೇಶನದ ಚಿತ್ರ ‘ಚಿಟ್ಟೆ’. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ, ಸಾಹಿತ್ಯ, ಸಂಗೀತ ವಿಭಾಗಗಳ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ.
ಪೂರ್ಣಿಮಾ ಪ್ರಸನ್ನ ನಿರ್ಮಾಣ ಮಾಡುತ್ತಿದ್ದಾರೆ. ಯಶಸ್ ಸೂರ್ಯ, ನಾಗೇಶ್ ಕಾರ್ತಿಕ್ ಮತ್ತು ಹರ್ಷಿಕಾ ಪೂಣಚ್ಚ ಪ್ರಧಾನ ಭೂಮಿಕೆಯಲ್ಲಿದ್ದಾರೆ. ವಿಶ್ವಜಿತ್ ಛಾಯಾಗ್ರಹಣ ಚಿತ್ರಕ್ಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.