ಅನುಷ್ಕಾ ಶೆಟ್ಟಿ ನಟನೆಯ ‘ನಿಶ್ಯಬ್ದಂ’ ಸಿನಿಮಾ ಅಕ್ಟೋಬರ್ 2ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗುತ್ತಿದೆ. ಹೇಮಂತ್ ಮಧುಕರ್ ನಿರ್ದೇಶನದ ಇದರಲ್ಲಿ ಆಕೆಯದು ಮಾತು ಬಾರದ ಕಲಾವಿದೆಯ ಪಾತ್ರ.

ಕಳೆದ ಕೆಲವು ದಿನಗಳಿಂದ ಅನುಷ್ಕಾ ಇದರ ಪ್ರಚಾರದಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಿನಿಮಾ ಕುರಿತ ಪ್ರಚಾರದ ಜೊತೆಗೆ ಅಭಿಮಾನಿಗಳೊಟ್ಟಿಗೆ ಸಂವಾದ ಕೂಡ ನಡೆಸುತ್ತಿದ್ದಾರೆ. ಇತ್ತೀಚೆಗೆ ಝೂಮ್ ಆ್ಯಪ್ ಮೂಲಕ ಆಕೆ ಮಾಧ್ಯಮದವರೊಟ್ಟಿಗೂ ಸಂವಾದ ನಡೆಸಿದ್ದು ಉಂಟು. ಚಿತ್ರದ ಬಗ್ಗೆ ಉತ್ಸಾಹದಿಂದಲೇ ಮಾತನಾಡಿದ ಆಕೆಯು ಪತ್ರಕರ್ತರೊಬ್ಬರು ಕೇಳಿದ ಅನಿರೀಕ್ಷಿತ ಪ್ರಶ್ನೆಗೆ ಕೆಲಕಾಲ ವಿಚಲಿತಗೊಂಡರಂತೆ.

ಅಂದಹಾಗೆ ಈಗ ಅನುಷ್ಕಾಗೆ 38 ವರ್ಷ. ‘ಬಾಹುಬಲಿ’ ಸರಣಿ ಸಿನಿಮಾಗಳ ಖ್ಯಾತಿಯ ಈ ನಟಿ ಯಾವಾಗ ಹಸೆಮಣೆ ಏರುತ್ತಾರೆ ಎಂಬ ಕುತೂಹಲ ಆಕೆಯ ಅಭಿಮಾನಿಗಳಲ್ಲಿರುವುದು ಸಹಜ.

ಸಂವಾದದಲ್ಲಿ ‘ನೀವು ಯಾವಾಗ ಮದುವೆಯಾಗುತ್ತೀರಿ’ ಎಂಬ ಪ್ರಶ್ನೆಗೆ ಅನುಷ್ಕಾ ಉತ್ತರಿಸುವ ಗೊಡವೆಗೂ ಹೋಗಲಿಲ್ಲವಂತೆ. ‘ನನಗೆ ಈ ಪ್ರಶ್ನೆಗೆ ಉತ್ತರಿಸಲು ಇಷ್ಟವಿಲ್ಲ’ ಎಂದು ಪ್ರತಿಕ್ರಿಯಿಸಿದರಂತೆ. ಅಪ್ಪಿತಪ್ಪಿಯೂ ಆಕೆ ತನ್ನ ಮದುವೆ ಬಗ್ಗೆ ಒಂದು ಪದವನ್ನೂ ಮಾತನಾಡಿಲ್ಲ.

ಅನುಷ್ಕಾಳ ಮದುವೆ ಸಂಬಂಧ ಟಾಲಿವುಡ್ ಅಂಗಳದಲ್ಲಿ ಗಾಳಿಸುದ್ದಿಗಳಿಗೆ ಕೊರತೆ ಇಲ್ಲ. ಕಳೆದ ವರ್ಷ ಉತ್ತರ ಭಾರತದ ಕ್ರಿಕೆಟರ್ ಜೊತೆಗೆ ಅನುಷ್ಕಾ ದಾಂಪತ್ಯ ಜೀವನಕ್ಕೆ ಅಡಿ ಇಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೊನೆಗೆ, ‘ನನ್ನ ಅಪ್ಪ–ಅಮ್ಮ ನೋಡಿದ ಹುಡುಗನನ್ನು ಮದುವೆಯಾಗುತ್ತಾನೆ’ ಎಂದು ಹೇಳುವ ಮೂಲಕ ಈ ಸುದ್ದಿಯನ್ನು ಆಕೆ ಸಾರಸಗಟಾಗಿ ತಿರಸ್ಕರಿಸಿದ್ದರು. ಇದಾದ ಬಳಿಕ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರ ಪುತ್ರನ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಆಕೆ ಪ್ರತಿಕ್ರಿಯೆ ನೀಡಲಿಲ್ಲ.

ಅನುಷ್ಕಾ ಹೆಸರು ಹಲವು ನಟರೊಟ್ಟಿಗೆ ತಳುಕು ಹಾಕಿಕೊಂಡಿದ್ದು ಉಂಟು. ಆಕೆ ನಟ ಗೋಪಿಚಂದ್ ಪ್ರೇಮಪಾಶಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿಯಿತ್ತು. ‘ಬಾಹುಬಲಿ’ ಸರಣಿ ಸಿನಿಮಾಗಳ ಯಶಸ್ಸಿನ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಇಬ್ಬರೂ ಇದನ್ನು ತಿರಸ್ಕರಿಸಿದ್ದರು.

ಸಂವಾದದ ವೇಳೆ ತಾನು ಹೊಸದಾಗಿ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿಯೂ ಆಕೆ ಬಹಿರಂಗಪಡಿಸಿದ್ದಾರೆ. 2021ರ ವೇಳೆಗೆ ಇವುಗಳ ಚಿತ್ರೀಕರಣ ಶುರುವಾಗಲಿದೆಯಂತೆ. ಆದರೆ, ಈ ಸಿನಿಮಾಗಳ ನಿರ್ದೇಶಕರು ಮತ್ತು ನಿರ್ಮಾಪಕರ ಬಗ್ಗೆ ಆಕೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.