ಶನಿವಾರ, ಜನವರಿ 25, 2020
16 °C

ಪ್ರೇಕ್ಷಕರಿಗೆ ನಟ ದರ್ಶನ್‌ ಹೇಳಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಗಾಂಧಿನಗರದ ಗಲ್ಲಾಪೆಟ್ಟಿಗೆಯ ಯಜಮಾನ. ಅವರು ನಟಿಸಿದ ಸಿನಿಮಾ ತೆರೆ ಕಾಣುತ್ತಿದೆ ಎಂದರೆ ಅಂದು ಬೇರೆ ಸಿನಿಮಾಗಳ ಬಿಡುಗಡೆಗೆ ನಿರ್ಮಾಪಕರು ಮತ್ತು ವಿತರಕರು ಹಿಂದೇಟು ಹಾಕುವುದೇ ಹೆಚ್ಚು. ಇದು ಅಚ್ಚರಿಯಾದರೂ ಸತ್ಯ. ‘ಒಡೆಯ’ ಚಿತ್ರದ ಬಿಡುಗಡೆಯ ದಿನದಂದು ಯಾವೊಂದು ಕನ್ನಡ ಚಿತ್ರವೂ ತೆರೆ ಕಾಣದಿರುವುದೇ ಇದಕ್ಕೊಂದು ಸ್ಪಷ್ಟ ನಿದರ್ಶನ.

ಕಳೆದ ವರ್ಷ ದರ್ಶನ್ ನಟನೆಯ ಒಂದೂ ಸಿನಿಮಾವೂ ಬಿಡುಗಡೆಯಾಗಿರಲಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಬೇಸರಕ್ಕೂ ಕಾರಣವಾಗಿತ್ತು. ಈ ವರ್ಷ ಅಂತಹ ಪರಿಸ್ಥಿತಿ ಮರುಕಳಿಸದಂತೆ ಅವರು ಎಚ್ಚರವಹಿಸಿದ್ದು ಉಂಟು. ಹಾಗಾಗಿಯೇ, ಈ ವರ್ಷ ಅವರು ನಟಿಸಿದ ‘ಯಜಮಾನ’, ‘ಮುನಿರತ್ನ ಕುರುಕ್ಷೇತ್ರ’ ಮತ್ತು ‘ಒಡೆಯ’ ಚಿತ್ರಗಳು ತೆರೆ ಕಂಡಿವೆ.

‘ಯಜಮಾನ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಬಾಕ್ಸ್‌ ಆಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿದ್ದು ಉಂಟು. ‘ಒಡೆಯ’ ಕೂಡ ಭರ್ಜರಿ ಆರಂಭ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಪ್ರೀತಿಗೆ ದಚ್ಚು ಕೂಡ ಅಭಿಮಾನಿಗಳಿಗೆ ಧನ್ಯವಾದ ಹೇಳುವುದನ್ನು ಮರೆತಿಲ್ಲ.

‘ಕಳೆದ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ ತಾಳ್ಮೆಯಿಂದ ಕಾದು ಈ ವರ್ಷ ಬಿಡುಗಡೆಯಾದ 3 ಚಿತ್ರಗಳಿಗೂ ನೀವು ತೋರಿರುವ ಪ್ರೀತಿ -ಅಭಿಮಾನಕ್ಕೆ ಧನ್ಯವಾದಗಳು. ಮನೆಮಂದಿಯೆಲ್ಲಾ ಜೊತೆಗೆ ಬಂದು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ, ಶುಭ ಕೋರಿದ ನನ್ನ ಎಲ್ಲಾ ಸೆಲೆಬ್ರಿಟಿಗಳು, ಸ್ನೇಹಿತರಿಗೂ ಸದಾ ಚಿರಋಣಿ’ ಎಂದು ದರ್ಶನ್‌ ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)