ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಕ್ಕಿದ್ದಕ್ಕೂ ಕೇಸ್ ಹಾಕಲಾಗಿದೆ: ಟ್ವಿಟ್ಟರ್‌ನಲ್ಲಿ ವಿಡಿಯೊ ಹಾಕಿದ ಕಂಗನಾ

Last Updated 8 ಜನವರಿ 2021, 10:59 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ನನ್ನನ್ನು ಯಾಕೆ? ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಈಗ ದೈಹಿಕವಾಗಿ ಹಿಂಸಿಸಲಾಗುತ್ತಿದೆಎಂದು ಎಂದು ಪ್ರಶ್ನಿಸಿದ್ದಾರೆ. ನನಗೆ ಈ ದೇಶದ ಜನರಿಂದ ಉತ್ತರ ಬೇಕು. ನಾನು ನಿಮ್ಮ ಪರವಾಗಿ ನಿಂತಿದ್ದೆ. ಇಂದು ನೀವು ನನಗಾಗಿ ನಿಲ್ಲಬೇಕಾದ ಸಮಯ ಎಂದು ಹೇಳಿದ್ದಾರೆ.

“ದೇಶದ ಕಲ್ಯಾಣದ ಬಗ್ಗೆ ಮಾತನಾಡಲು ಪ್ರಾರಂಭಿಸಿದ ದಿನದಿಂದ ಕೆಲವು ಜನ ನನಗೆ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ. ನನ್ನನ್ನು ಯಾವ ರೀತಿ ಶೋಷಣೆ ಮಾಡಲಾಗುತ್ತಿದೆ ಎಂಬುದನ್ನು ಇಡೀ ದೇಶ ನೋಡುತ್ತಿದೆ. ಕಾನೂನು ಬಾಹಿರವಾಗಿ ನನ್ನ ಮನೆ ಉರುಳಿಸಲಾಯಿತು. ನಾನು ರೈತರ ಪರವಾಗಿ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಯಿತು. ನಾನು ನಕ್ಕಿದ್ದಕ್ಕೂ ನನ್ನ ವಿರುದ್ಧ ಒಂದು ಕೇಸ್ ಹಾಕಲಾಗಿದೆ.

ಕೋವಿಡ್ ಆರಂಭಿಕ ದಿನಗಳಲ್ಲಿ ವೈದ್ಯರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರ ಬಗ್ಗೆ ಮಾತನಾಡಿದ್ದಕ್ಕೆ ನನ್ನ ಸಹೋದರಿ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ನಾನು ಟ್ವಿಟ್ಟರ್‌ನಲ್ಲಿ ಇಲ್ಲದ ಸಮಯದಲ್ಲಿ ಏನೋ ಟ್ವಿಟ್ ಮಾಡಿದ್ದೇನೆಂದು ನನ್ನ ವಿರುದ್ಧ ಕೇಸ್ ಹಾಕಲಾಗಿತ್ತು. ಇದರಲ್ಲಿ ಯಾವುದೇ ಉರುಳಿಲ್ಲ ಎಂದು ನ್ಯಾಯಾಲಯ ಪ್ರಕರಣವನ್ನು ತಿರಸ್ಗರಿಸಿದೆ ಎಂದು ಕಂಗನಾ ಹೇಳಿದ್ದಾರೆ.

ಪೊಲೀಸ್ ಠಾಣೆಗೆ ತೆರಳಿ ಹಾಜರಾತಿ ಹಾಕುವಂತೆ ನನಗೆ ಆದೇಶ ನೀಡಲಾಯ್ತು. ಇದು ಯಾವ ರೀತಿಯ ಹಾಜರಾತಿ ಎಂದು ಯಾರೊಬ್ಬರೂ ನನಗೆ ಹೇಳಿಲ್ಲ. ನನಗಾದ ಹಿಂಸೆಯನ್ನು ಎಲ್ಲಿಯೂ ಹೇಳದಂತೆ ತಾಕೀತು ಮಾಡಲಾಗಿದೆ ಎಂದು ಕಂಗನಾ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಕಂಗನಾ, ನಾವು "ಮಧ್ಯಕಾಲೀನ ಯುಗದಲ್ಲಿ" ವಾಸಿಸುತ್ತಿದ್ದೀವಾ ಎಂದು ದೇಶದ ಸುಪ್ರೀಂ ಕೋರ್ಟ್ ಅನ್ನು ಪ್ರಶ್ನಿಸಿದ್ದಾರೆ. “ಇದು ಮಹಿಳೆಯರನ್ನು ಜೀವಂತವಾಗಿ ಸುಟ್ಟುಹಾಕಲಾಗುತ್ತಿದ್ದ ಮತ್ತು ಮಹಿಳೆಯರು ಯಾರೊಂದಿಗೂ ಮಾತನಾಡಲು ಸಹ ಸಾಧ್ಯವಿಲ್ಲದ ಪರಿಸ್ಥಿತಿ ಇದ್ದ ಮಧ್ಯಕಾಲೀನ ಯುಗವೇ? ಎಂದು ನಾನು ಭಾರತದ ಸುಪ್ರೀಂ ಕೋರ್ಟ್ ಅನ್ನು ಕೇಳಲು ಬಯಸುತ್ತೇನೆ,‘ಈ ಚಿತ್ರಹಿಂಸೆ ಜಗತ್ತಿನ ಮುಂದೆ ನಡೆಯುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ 1000 ವರ್ಷಗಳಲ್ಲಿ ನಾವು ಅನುಭವಿಸಿದ ಚಿತ್ರಹಿಂಸೆಯನ್ನು ರಾಷ್ಟ್ರೀಯವಾದಿ ದನಿಗಳನ್ನು ಅಡಗಿಸಿದರೆ ನಾವು ಮತ್ತೆ ಅದೇ ಚಿತ್ರಹಿಂಸೆ ಸಹಿಸಿಕೊಳ್ಳಬೇಕಾಗುತ್ತದೆ ಎಂದು ವಿಡಿಯೊ ವೀಕ್ಷಿಸುತ್ತಿರುವ ಜನರಿಗೆ ತಿಳಿಸಲು ಬಯಸುತ್ತೇನೆ. ” ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT