ಚಂಢೀಗಡಕ್ಕೆ ಹೋಗಿದ್ಯಾಕೆ ರಶ್ಮಿಕಾ ಮಂದಣ್ಣ!

ದಕ್ಷಿಣ ಭಾರತದ ಸೆನ್ಸೇಷನ್ ಬ್ಯೂಟಿ ಎನ್ನಿಸಿಕೊಂಡಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಕ್ರಿಯಾಶೀಲರಾಗಿರುವ ಇವರು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಈ ಬೆಡಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಫೋಟೊವೊಂದನ್ನು ಅಪ್ಲೋಡ್ ಮಾಡಿದ್ದರು. ಅಲ್ಲದೇ ‘ಚಂಢೀಗಡದಲ್ಲಿ ಮೊದಲ ಬಾರಿಗೆ’ ಎಂಬ ಶೀರ್ಷಿಕೆಯನ್ನು ಹಾಕಿಕೊಂಡಿದ್ದರು.
ಅವರು ಸಿನಿಮಾ ಶೂಟಿಂಗ್ಗೆ ಚಂಢೀಗಡಕ್ಕೆ ಹೋಗಿದ್ದಾರೋ ಅಥವಾ ವಿರಾಮಕ್ಕೋ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ ಆಕೆ ನಿಜಕ್ಕೂ ಅಲ್ಲಿಗೆ ತೆರಳಿದ್ದು ಬೇರೆಯದ್ದೇ ಕಾರಣಕ್ಕೆ. ಅದೇನೆಂದರೆ ಮ್ಯೂಸಿಕ್ ವಿಡಿಯೊವೊಂದರ ಚಿತ್ರೀಕರಣಕ್ಕಾಗಿ ರಶ್ಮಿಕಾ ಚಂಢೀಗಡಕ್ಕೆ ಹೋಗಿದ್ದರು. ಈ ಮ್ಯೂಸಿಕ್ ವಿಡಿಯೊ ರ್ಯಾಪರ್ ಬಾದ್ಶಾ, ಅಮಿತ್ ಉಚನಾ ಹಾಗೂ ಯುವನ್ ಶಂಕರ್ ರಾಜ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಅಲ್ಲಿ ಎರಡು ದಿನಗಳ ಕಾಲ ಶೂಟಿಂಗ್ ಮಾಡಲಾಗಿದ್ದು ರಶ್ಮಿಕಾ ಭಿನ್ನನೋಟದಲ್ಲಿ ಮಿಂಚಿದ್ದಾರೆ.
ಈ ಮ್ಯೂಸಿಕ್ ವಿಡಿಯೊದಲ್ಲಿ ಉತ್ತರ ಹಾಗೂ ದಕ್ಷಿಣದ ಮೂವರು ಸಂಗೀತ ಮಾಂತ್ರಿಕರು ಒಂದಾಗಿದ್ದಾರೆ. ಅಲ್ಲದೇ ರಶ್ಮಿಕಾ ಅವರ ಮೊದಲ ಮ್ಯೂಸಿಕಲ್ ವಿಡಿಯೊ ಇದು. ಅಭಿಮಾನಿಗಳು ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಕುತೂಹಲರಾಗಿದ್ದಾರೆ. ಆದರೆ ರಶ್ಮಿಕಾ ಮಾತ್ರ ‘ಇದರ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಿರಿ’ ಎನ್ನುವ ಮೂಲಕ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ. ಸದ್ಯ ಆ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆ ಕಾರ್ತಿ ಜೊತೆ ತಮಿಳಿನ ಸುಲ್ತಾನ್ ಹಾಗೂ ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ಪೊಗರು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.