ಮಂಗಳವಾರ, ಮೇ 17, 2022
27 °C

ಸಂಗೀತ ನಿರ್ದೇಶಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ‘ಮಹಾನಟಿ’ ಕೀರ್ತಿ ಸುರೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅನಿರುದ್ಧ್‌ ರವಿಚಂದ್ರನ್‌ ಬಹುಶಃ ಈ ಹೆಸರು ಕೇಳದವರು ಕಡಿಮೆ ಎನ್ನಬಹುದು. ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಅನಿರುದ್ಧ್‌ ಹೆಸರು ಮುಂಚೂಣಿಯಲ್ಲಿದೆ. ಕಾಲಿವುಡ್‌ನ ದೊಡ್ಡ ದೊಡ್ಡ ನಟರ ಜೊತೆ ಕೆಲಸ ಮಾಡಿರುವ ಇವರು ಟಾಲಿವುಡ್‌ನಲ್ಲೂ ಹೆಜ್ಜೆ ಗುರುತು ಮೂಡಿಸಿದ್ದಾರೆ. ಇವರ ಹಾಡು ಹಾಗೂ ಸಂಗೀತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ನಟಿ ಆ್ಯಂಡ್ರಿಯಾ ಅವರೊಂದಿಗಿನ ಫೋಟೊಗಳು ಹಾಗೂ ನಾಯಕಿ ಸುಚಿತ್ರಾ ಅವರ ಆರೋಪದ ಕಾರಣದಿಂದ ಪ್ಲೇಬಾಯ್‌ ಕೂಡ ಎನ್ನಿಸಿಕೊಂಡಿದ್ದಾರೆ ಅನಿರುದ್ಧ್‌.

ಇತ್ತೀಚಿನ ವರ್ಷಗಳಲ್ಲಿ ಮೌನವಾಗಿದ್ದು ತಮ್ಮ ಕೆಲಸಗಳ ಮೂಲಕ ಮಾತನಾಡುತ್ತಿದ್ದ ಅನಿರುದ್ಧ್ ಕಳೆದ ವಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಅವರೊಂದಿಗಿನ ಫೋಟೊಗಳು. ಅನಿರುದ್ಧ್ ಹಾಗೂ ಕೀರ್ತಿ ಜೊತೆಯಾಗಿ ತೆಗೆಸಿಕೊಂಡ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೇ ಫೋಟೊದಲ್ಲಿ ಇಬ್ಬರನ್ನು ನೋಡಿದವರು ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎನ್ನುತ್ತಿದ್ದಾರೆ. ಜೊತೆಗೆ ಈ ಜೋಡಿ ವರ್ಷಾಂತ್ಯದೊಳಗೆ ಮದುವೆಯಾಗಲಿದ್ದಾರೆ ಎಂಬ ವದಂತಿಯೂ ಹರಡುತ್ತಿದೆ. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಇಬ್ಬರೂ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈಗ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಕೀರ್ತಿ ಹಾಗೂ ಅನಿರುದ್ಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು