ಸೋಮವಾರ, ಮಾರ್ಚ್ 1, 2021
27 °C

ಜೊತೆಯಾಗಿ ಸಿನಿಮಾ ಮಾಡಲಿದ್ದಾರಾ ಶಂಕರ್ ಹಾಗೂ ಯಶ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌ ಸಿನಿಮಾದ ನಂತರ ಚಂದನವನದ ನಟ ಯಶ್ ಅವರ ಇಮೇಜ್‌ ಬದಲಾಗಿದೆ. ಆ ಸಿನಿಮಾದ ಬಳಿಕ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಭಾರತೀಯ ನಟ ಎಂಬ ಖ್ಯಾತಿಯೂ ಅವರನ್ನು ಅರಸಿ ಬಂದಿದೆ. ಸದ್ಯ ಈ ನಟ ಕೆಜಿಎಫ್‌ ಭಾಗ–2 ಅನ್ನು ಮುಗಿಸಿದ್ದಾರೆ. ಈ ಸಿನಿಮಾ ಇನ್ನೇನು ಬಿಡುಗಡೆಯಾಗಲಿದೆ.

ಈಗ ಎಲ್ಲರೂ ಯಶ್ ಮುಂದಿನ ಸಿನಿಮಾ ಯಾವುದು ಎಂದು ಕಾತರದಿಂದ ನೋಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರೊಂದಿಗೆ ಬಹುಭಾಷಾ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ ಎಂಬ ಗಾಳಿಸುದ್ದಿಯೊಂದಿತ್ತು. ಆದರೆ ಆ ಬಗ್ಗೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ.

ಆದರೆ ಸದ್ಯದ ಸುದ್ದಿಯ ಪ್ರಕಾರ ಭಾರತೀಯ ಸಿನಿರಂಗದ ದಿಗ್ಗಜ, ಎಂದಿರನ್‌ ಹಾಗೂ ಅನ್ನಿಯನ್‌ ಖ್ಯಾತಿಯ ನಿರ್ದೇಶಕ ಶಂಕರ್ ಜೊತೆ ಸಿನಿಮಾ ಮಾಡಲಿದ್ದಾರೆ ಯಶ್ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಇದನ್ನೂ ಓದಿ: 

ಸದ್ಯ ಶಂಕರ್ ಕಮಲಹಾಸನ್‌ ಜೊತೆ ‘ಇಂಡಿಯನ್ 2’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾ ಈ ವರ್ಷದ ಅಂತ್ಯಕ್ಕೆ ಮುಗಿಯಲಿದೆ. ಶಂಕರ್ ಮುಂದಿನ ವರ್ಷ ತಮ್ಮ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಮಾಡಲು ಯೋಜನೆ ಹಾಕಿಕೊಂಡಿದ್ದು, ಆ ಸಿನಿಮಾ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ ಎನ್ನಲಾಗುತ್ತಿದೆ.

ಕಳೆದ ವರ್ಷವೇ ಈ ಚಿತ್ರಕ್ಕೆ ಯಶ್ ನಾಯಕ ಎಂಬ ಗಾಳಿಸುದ್ದಿ ಇತ್ತು. ಈಗ ಅದು ನಿಜವಾಗುತ್ತಿದೆ ಎನ್ನುತ್ತಿವೆ ಮೂಲಗಳು. ಆದರೆ ಯಶ್‌ ಹಾಗೂ ಶಂಕರ್ ಇಬ್ಬರ ಕಡೆಯಿಂದಲೂ ಸಿನಿಮಾಕ್ಕೆ ಸಂಬಂಧಿಸಿ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅವರೊಂದಿಗೆ ತೆಲುಗಿನ ಖ್ಯಾತ ನಟ ರಾಮ್‌ಚರಣ್ ಕೂಡ ನಟಿಸಲಿದ್ದಾರೆ ಎಂಬುದೂ ಕೇಳಿ ಬರುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು