ಬೆಂಗಳೂರು: ‘ಕಟಿಂಗ್ ಶಾಪ್’ಚಿತ್ರದ’ಯಾಕೋ ಸಿಸ್ಯಾ..! ಎಂಬ ಮೊದಲ ವಿಡಿಯೊಸಾಂಗ್ ನಾಳೆ ಪಿಆರ್ಕ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಆಗಲಿದೆ.

ಇದೊಂದು ಸಂಪೂರ್ಣ ಹೊಸ ತಂಡ ಸೇರಿಕೊಂಡು ಮಾಡಿರುವ ಚಿತ್ರ. ಡೈರೆಕ್ಟರ್ಗಳ ಬಗ್ಗೆ, ಕ್ರೀಡಾಪಟುಗಳ ಬಗ್ಗೆ, ಸಂಗೀತ ಕ್ಷೇತ್ರದವರ ಬಗ್ಗೆ ಸಿನಿಮಾಗಳು ಬಂದಿವೆ. ಆದರೆ, ಒಬ್ಬ ಫಿಲ್ಮ್ ಎಡಿಟರ್ ಬಗೆಗಿನ ಚಿತ್ರ ಬಹುಶಃ ಇದೆ ಮೊದಲು. ಒಬ್ಬ ಎಡಿಟರ್ನ ಜೀವನವನ್ನು ಹಾಸ್ಯಮಯವಾಗಿ ಕಟ್ಟಿಕೊಡುತ್ತ ಹೋಗುತ್ತದೆ ಈ ಚಿತ್ರ. ಒಬ್ಬ ಸಿನಿಮಾ ಸಂಕಲನಕಾರನ ಜೀವನದ ಜರ್ನಿಯನ್ನು ಈ ಚಿತ್ರ ಹೇಳುತ್ತದೆ. ಮಾರ್ಚ್ 26ಕ್ಕೆ prk ಆಡಿಯೊ ಯೂಟ್ಯೂಬ್ ಚಾನಲ್ನಲ್ಲಿಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಇದನ್ನು ಒಂದು ಲಕ್ಷಕ್ಕೂ ಹೆಚ್ಚಿನ ಜನ ನೋಡಿದ್ದಾರೆ.

ಚಿತ್ರದ ನಿರ್ದೇಶಕ ಪವನ್ ಭಟ್ ಈ ಮೊದಲು ಆಪರೇಶನ್ ಅಲಮೇಲಮ್ಮ, ಮಾಯಾಬಜಾರ್, ಅಳಿದು ಉಳಿದವರು, ರಾಂಚಿ ಮೊದಲಾದ ಚಿತ್ರಗಳಿಗೆ ಬರಹಗಾರನಾಗಿ, ಗೀತ ಸಾಹಿತಿಯಾಗಿ ಕೆಲಸ ಮಾಡಿದ್ದಾರೆ. ಮೊದಲ ಬಾರಿ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯೂ ನಿರ್ದೇಶಕರದ್ದೇ ಆಗಿದ್ದು, ಅವರಿಗೆಬಿ ಪ್ರವೀಣ್ ಕೈಜೋಡಿಸಿದ್ದಾರೆ.

ನಾಯಕ ನಟ ಕೆ ಬಿ ಪ್ರವೀಣ್ ತಮ್ಮ ಕಿ ಕಿ ಕನ್ನಡ ಯೂಟ್ಯೂಬ್ ಚಾನಲ್ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದರು. ಜೊತೆಗೆ ಈ ಚಿತ್ರದ ಸಂಗೀತ ನಿರ್ದೇಶನದ ಹೊಣೆಯನ್ನೂ ಅವರೇ ಹೊತ್ತಿದ್ದಾರೆ.

ಯಂಗ್ ಥಿಂಕರ್ಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿಗುರ್ಪುರ ಕೆ ಉಮೇಶ್ ಮತ್ತು ಗಣೇಶ್ ಐತಾಳ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರ್ಪುರ ಕೆ ಉಮೇಶ್, ನಿರ್ಮಾಣದ ಜೊತೆಗೆ ಕಾಮಿಡಿ ಪಾತ್ರವನ್ನೂ ನಿರ್ವಹಿಸಿದ್ದಾರೆ.

ಅರ್ಚನಾ ಕೊಟ್ಟಿಗೆ, ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ , ಕೆ ವಿ ಆರ್, ದೊರೈ ಭಗವಾನ್ (ಎಸ್ ಕೆ ಭಗವಾನ್) , ಓಂ ಪ್ರಕಾಶ್ ರಾವ್, ವತ್ಸಲಾ ಮೋಹನ್ ತಾರಾಗಣದಲ್ಲಿದ್ದಾರೆ. ತರುಣ್ ಕಿಶೋರ್ ಸುಧೀರ್ ಗೆಸ್ಟ್ ಅಪಿಯರೆನ್ಸ್ ಕೊಡಲಿದ್ದಾರೆ.ಸ್ಕಂದ ರತ್ನಂ ಚಿತ್ರದ ಛಾಯಾಗ್ರಾಹಣದ ಹೊಣೆ ಹೊತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.