ಮಂಗಳವಾರ, ನವೆಂಬರ್ 24, 2020
22 °C

ಯಶ್‌ಗೆ ಐಸ್‌ಕ್ರೀಂ ಕೊಟ್ಟಳಾ ಐರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಶ್‌ ಮಗಳು ಐರಾ ಅಪ್ಪನಿಗೆ ಐಸ್‌ಕ್ರೀಂ ಕೊಟ್ಟಳಾ?

ಯಶ್‌ ತಮ್ಮ ಮಗಳು ಐರಾ ಜತೆ ಕಾಲ ಕಳೆದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಮೆಚ್ಚುಗೆ ಗಳಿಸಿದೆ. 

ರೆಸ್ಟೊರೆಂಟ್‌ನಲ್ಲಿ ಮಗಳು ಐಸ್‌ಕ್ರೀಂ ತಿನ್ನುತ್ತಿರುತ್ತಾಳೆ. ಯಶ್ ಅವರಿ‌ಗೂ ಒಂದು ಚಮಚ ತಿನ್ನಿಸುವಂತೆ ಮುಂದಾಗುವ ಐರಾ ತಾನೇ ತಿಂದುಬಿಡುತ್ತಾಳೆ. ಈ ದೃಶ್ಯ ಎರಡು ಮೂರು ಬಾರಿ ಪುನರಾವರ್ತನೆ ಆಗುತ್ತದೆ. ಕೊನೆಗೆ ಯಶ್‌ ನಂಗೆ ಬೇಡ ಹೋಗು ಅನ್ನುತ್ತಾ ಹುಸಿ ಕೋಪ ತೋರುತ್ತಾರೆ. ಬಾ..ಬಾ ನಾನೂ ಹಂಗೇ ಮಾಡ್ತೀನಿ ಅನ್ನುತ್ತಾರೆ. ಟಿಶ್ಯೂ ಪೇಪರ್‌ನಿಂದ ಮಗಳ ತುಟಿ, ಗಲ್ಲ ಒರೆಸುತ್ತಾರೆ. ತಂದೆ ಮಗಳು ಇಬ್ಬರೂ ನಗುತ್ತಾರೆ. ಯೂಟ್ಯೂಬ್‌ನಲ್ಲಿ 59 ಸೆಕೆಂಡ್‌ಗಳ ಈ ವಿಡಿಯೋವನ್ನು ಸುಮಾರು 63 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.  

ವಿಡಿಯೊ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು