ಸೋಮವಾರ, ಜನವರಿ 17, 2022
21 °C

ನುಸ್ರತ್ ಜಹಾನ್‌ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ ನಟ ಯಶ್ ದಾಸ್‌ಗುಪ್ತಾ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಂಗಾಳಿ ಬ್ಯೂಟಿ ನುಸ್ರತ್ ಜಹಾನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಇಂದಿಗೆ ನಟಿ 32 ವರ್ಷಗಳನ್ನು ಪೂರೈಸಿದ್ದಾರೆ. ನಟಿ ತಮ್ಮ ಹುಟ್ಟುಹಬ್ಬದ ಪಾರ್ಟಿಯ ಸ್ಮರಣೀಯ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ನಟಿಯೊಂದಿಗೆ ಡೇಟಿಂಗ್‌ ಮೂಲಕ ಸುದ್ದಿಯಾಗಿರುವ ನಟ ಯಶ್ ದಾಸ್‌ಗುಪ್ತಾ ಕೂಡ ನುಸ್ರತ್ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ.

ಯಶ್ ದಾಸ್‌ಗುಪ್ತ ಅವರು ನುಸ್ರತ್ ಜಹಾನ್ ಅವರ 32ನೇ ಹುಟ್ಟುಹಬ್ಬದಂದು ನಟಿಯೊಂದಿಗಿರುವ ಅಪರೂಪದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರಿದ್ದಾರೆ. ನಟಿ ಈ ಸ್ಕ್ರೀನ್‌ಶಾಟ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಯಶ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ನುಸ್ರತ್ ಜಹಾನ್ ಅವರು ತಮ್ಮ ಹುಟ್ಟುಹಬ್ಬದ ಪಾರ್ಟಿಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಾಯಿ ಮತ್ತು ಮಗುವಿನ ಆಕೃತಿಯನ್ನು ಒಳಗೊಂಡಿರುವ ಕೇಕ್ ಮುಂದೆ ಅವರು ಕುಳಿತಿದ್ದಾರೆ.

ನಟಿಯಾಗಿದ್ದ ನುಸ್ರತ್ ತೃಣಮೂಲ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿ ಸುದ್ದಿಯಾಗಿದ್ದರು.

ನುಸ್ರತ್ ಜಹಾನ್ ಹಾಗೂ ಟರ್ಕಿಯಲ್ಲಿರುವ ಉದ್ಯಮಿ ನಿಖಿಲ್ ಜೈನ್ ಅವರ ವೈವಾಹಿಕ ಸಂಬಂಧ ಅಂತ್ಯವಾದ ಬಳಿಕ ನುಸ್ರತ್ ಅವರ ಹೆಸರು ಯಶ್ ದಾಸ್ ಗುಪ್ತಾ ಅವರ ಜೊತೆ ಗುರುತಿಸಿಕೊಂಡಿತ್ತು.

ನಿಖಿಲ್ ಜೈನ್ ಅವರನ್ನು ನುಸ್ರತ್ 2019 ರಲ್ಲಿ ಟರ್ಕಿಯಲ್ಲಿ ವಿವಾಹವಾಗಿದ್ದರು ಎನ್ನಲಾಗಿತ್ತು. ಆದರೆ, ಇದು ಭಾರತೀಯ ಕಾನೂನು ಪ್ರಕಾರ ಮದುವೆಯಲ್ಲ, ಅದೊಂದು ಲಿವ್‌ಇನ್ ರಿಲೇಶನ್‌ಶಿಪ್ ಎಂದು ಹೇಳಿ ನುಸ್ರತ್ ಕೈ ತೊಳೆದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು