ಕೆಲ ದಿನಗಳ ಹಿಂದೆ ಟೀಸರ್ ಮೂಲಕ ಗಮನಸೆಳೆದಿದ್ದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದಲ್ಲಿ ನಟ ಯಶ್ ಹಲವು ಅವತಾರಗಳಲ್ಲಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ‘ರಾಯ’ನಾಗಿ ಕಾಣಿಸಿಕೊಂಡಿರುವ ಯಶ್ ‘ಟಿಕೆಟ್’ ಎಂಬ ಪಾತ್ರದಲ್ಲೂ ಮಿಂಚಿದ್ದಾರೆ.

‘ರಾಯ’ದಲ್ಲಿ ಉದ್ದನೆಯ ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದ ಯಶ್ ಯಾರೂ ಊಹಿಸದ ರೀತಿಯಲ್ಲಿ ‘ಟಿಕೆಟ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಡ್ಡಕ್ಕೆ ಕತ್ತರಿ ಹಾಕಿ ಭಿನ್ನವಾದ ಲುಕ್ನಲ್ಲಿ ಯಶ್ ಬಂದಿದ್ದಾರೆ. ತಮ್ಮ ಡಾನ್ಸ್ ಶೈಲಿಯನ್ನೂ ಇಲ್ಲಿ ತೆರೆದಿಟ್ಟಿದ್ದಾರೆ. ಈ ಮೂಲಕ ಸಿನಿಮಾದಲ್ಲಿನ ಅವರ ಎರಡನೇ ಲುಕ್ ಪರಿಚಯಿಸಿದ್ದಾರೆ. ಜೊತೆಗೆ ಡಬಲ್ ರೋಲ್ನ ಆಖ್ಯಾನಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ.

ಸಿನಿಮಾದ ಟೀಸರ್ ಯುಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದ್ದು, ಇದರಲ್ಲಿನ ದೃಶ್ಯಗಳ ಆಧಾರದ ಮೇಲೆ ಕಥೆಯನ್ನು ಪ್ರೇಕ್ಷಕರು, ಅಭಿಮಾನಿಗಳು ಊಹಿಸುತ್ತಿದ್ದಾರೆ. ಬಿಡುಗಡೆಯಾದ 24 ಗಂಟೆಗಳಲ್ಲೇ ಸಿನಿಮಾದ ಟೀಸರ್ 19.7 ಕೋಟಿ ವೀಕ್ಷಣೆ ಪಡೆದಿದೆ. ‘ಟಾಕ್ಸಿಕ್’ನಲ್ಲಿ ನಟನಾಗಿ, ಸಹ–ಬರಹಗಾರರಾಗಿ, ಸಹ–ನಿರ್ಮಾಪಕನಾಗಿ ಯಶ್ ಹೊಸ ಹೆಜ್ಜೆ ಇಟ್ಟಿದ್ದು, ವೆಂಕಟ್ ಕೆ.ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್ನಡಿ ಯಶ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಜೆ.ಜೆ.ಪೆರ್ರಿ ‘ಟಾಕ್ಸಿಕ್’ನ ಸಾಹಸ ದೃಶ್ಯಗಳ ಸಂಯೋಜನೆ, ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜೀವ್ ರವಿ ಛಾಯಾಚಿತ್ರಗ್ರಹಣ, ಉಜ್ವಲ್ ಕುಲಕರ್ಣಿ ಸಂಕಲನ, ಟಿಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.