ಶನಿವಾರ, ಡಿಸೆಂಬರ್ 7, 2019
22 °C

ಐರಾಗೆ ಮೊದಲ ವರ್ಷದ ಹುಟ್ಟುಹಬ್ಬ: ಫೋಟೊ ಹಾಕಿ ಶುಭ ಕೋರಿದ ರಾಧಿಕಾ ಪಂಡಿತ್

Published:
Updated:
prajavani

ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಯಶ್–ರಾಧಿಕಾ ಅವರ ಕುಟುಂಬದಲ್ಲಿ ಎರಡನೇ ಮಗುವಿನ ಸಂತಸ ನೆಲೆಸಿರುವಾಗಲೇ, ಐರಾಳ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮವೂ ಬಂದಿದೆ.

ಹೌದು, ಪುಟಾಣಿ ಐರಾಗೆ ಇಂದು ಮೊದಲ ಹುಟ್ಟುಹಬ್ಬ. ಈ ಸಂಭ್ರಮವನ್ನು ರಾಧಿಕಾ ಪಂಡಿತ್‌ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದಾಗ ಐರಾಳೊಂದಿಗೆ ತೆಗೆದುಕೊಂಡಿದ್ದ ಫೋಟೊವನ್ನು ಹಾಕಿ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಯಶ್‌–ರಾಧಿಕಾ ಅಭಿಮಾನಿಗಳು ಐರಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಆಶೀರ್ವದಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ರಾಧಿಕಾ ಹಾಕಿರುವ ಪೋಸ್ಟ್‌ಗೆ ಸುಮಾರು 1400 ಮಂದಿ ಕಮೆಂಟ್‌ ಮಾಡಿದ್ದು, 140 ಮಂದಿ ಆ ಫೋಟೊವನ್ನು ಶೇರ್‌ ಮಾಡಿದ್ದಾರೆ.

ಇತ್ತೀಚೆಗಷ್ಟೇ ಐರಾಳ ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಬಿಸಿಲು ನೋಡೋದು ಹೇಗೆ ಅಂತ ಐರಾನ ಕೇಳಿದ್ರೆ ಮುದ್ದು ಮುದ್ದಾಗ ಎಕ್ಸ್​ಪ್ರೆಶನ್ ನೀಡಿ ಎಲ್ಲರ ಮನಸ್ಸು ಕದ್ದಿದ್ದಾಳೆ. ಸಾಮಾಜಿಕ ತಾಣಗಳಲ್ಲಿ ಎಲ್ಲಿ ನೋಡಿದರೂ ಐರಾಳ ಈ ವಿಡಿಯೊ ಕಾಣುತ್ತಿದೆ. ಲಕ್ಷಾಂತರ ಮಂದಿ ವೀಕ್ಷಿಸಿರುವ ಇದನ್ನು ಸಾವಿರಕ್ಕು ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.


ಐರಾಳೊಂದಿಗೆ ನಟಿ ಶ್ರೀಲಿಲಾ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು