ಮಧ್ಯಪ್ರದೇಶ: ಚಂದನವನದ ನಟ ಯಶ್ ಅವರು ಉಜ್ಜಯಿನಿ ಮಹಾಕಾಳೇಶ್ವರ ದೇಗುಲದಲ್ಲಿ ಆರತಿ ಬೆಳಗಿ, ಪೂಜೆ ಸಲ್ಲಿಸಿದ್ದಾರೆ. ಜತೆಗೆ ಬೆಳಗಿನ ಜಾವ ನಡೆಯುವ ಭಸ್ಮಾರತಿಯಲ್ಲಿ ಯಶ್ ಪಾಲ್ಗೊಂಡಿದ್ದರು

ಸುದ್ದಿ ಸಂಸ್ಥೆ ಎನ್ಐಎ ಜತೆಗೆ ಮಾತನಾಡಿರುವ ಅವರು, ‘ನಾನು ಶಿವನ ಭಕ್ತ, ಶಿವನಿಗೆ ಪೂಜೆ ಮಾಡಿರುವುದು ಖುಷಿ ಎನಿಸಿದೆ, ಆಶೀರ್ವಾದ ಪಡೆದಿದ್ದೇನೆ. ಜತೆಗೆ ಎಲ್ಲರ ಖುಷಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ’ ಎಂದು ಹೇಳಿದ್ದಾರೆ.

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರದಲ್ಲಿ ಯಶ್ ನಟಿಸುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಶ್ ಉಜ್ಜಯಿನಿ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಭಾನುವಾರ ಗಾಯಕ ಅರಿಜಿತ್ ಸಿಂಗ್ ದಂಪತಿ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು. ಭಸ್ಮಾರತಿಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದರು.

ಮಹಾಕಾಳೇಶ್ವರನಿಗೆ ಪ್ರತಿದಿನ ಬೆಳಿಗ್ಗೆ 3.30ರಿಂದ 5.30ರವರೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಭಸ್ಮಾರತಿ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.