ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನಗೆ ದಿನಕ್ಕೆ ಇಪ್ಪತ್ತೆರಡೇ ಗಂಟೆ.. ವರ್ಕೌಟ್ ಸಹ ಒಂದು ಯೋಗ: ನಟ ಸೋನು ಸೂದ್

ಇಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.
Published 21 ಜೂನ್ 2024, 9:37 IST
Last Updated 21 ಜೂನ್ 2024, 9:37 IST
ಅಕ್ಷರ ಗಾತ್ರ

ಬೆಂಗಳೂರು: ಇಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅನೇಕ ಸೆಲಿಬ್ರಿಟಿಗಳೂ ಸಹ ಯೋಗ ದಿನದಲ್ಲಿ ಪಾಲ್ಗೊಂಡು ಎಲ್ಲರೂ ಯೋಗ ಮಾಡಿ ಎಂಬ ಸಂದೇಶ ನೀಡುತ್ತಿದ್ದಾರೆ.

ಇನ್ನೂ ಕೆಲ ನಟ–ನಟಿಯರು ತಮ್ಮ ಪ್ರತಿದಿನದ ವರ್ಕೌಟ್‌ ಅನ್ನೇ ಒಂದು ಯೋಗವನ್ನಾಗಿ ಆಚರಿಸಕೊಂಡು ಬರುತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ನಟ ಸೋನು ಸೂದ್. ಸೋನು ಸೂದ್ ಯೋಗ ದಿನದ ಪ್ರಯುಕ್ತ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಪ್ರತಿದಿನ ಎರಡು ತಾಸು ವರ್ಕ್‌ಔಟ್‌ ಅನ್ನೇ ಯೋಗದ ರೀತಿ ಆಚರಿಸಿಕೊಂಡು ಬರುತ್ತಿದ್ದೇನೆ ಎಂಬ ಸಂದೇಶ ನೀಡಿದ್ದಾರೆ. ವರ್ಕ್‌ಔಟ್ ಇಲ್ಲದೇ ಅವರು ಒಂದು ದಿನ ಕಳೆದಿಲ್ಲ ಎಂಬುವುದನ್ನು ಅವರ ಆಪ್ತರ ಹೇಳುತ್ತಾರೆ.

ನನಗೆ ದಿನಕ್ಕೆ 22 ಗಂಟೆ ಮಾತ್ರ. ಇನ್ನೆರಡು ಗಂಟೆ ನನ್ನ ಫಿಟ್‌ನೆಸ್‌ಗೋಸ್ಕರವೇ ಮೀಸಲು ಎಂದು ವರ್ಕ್‌ಔಟ್‌ಗೆ ಸಮಯ ಮೀಸಲಿಡಬೇಕು ಎಂದು ಪರೋಕ್ಷವಾಗಿ ವ್ಯಾಯಾಮ, ಯೋಗಕ್ಕೆ ಸಮಯ ಮೀಸಲಿಡಬೇಕು ಎಂದು ತಿಳಿಸಿದ್ದಾರೆ.

ಈ ವಿಡಿಯೊವನ್ನು ಸೋನು ಸೂದ್ ಎಕ್ಸ್ ತಾಣದಲ್ಲಿ ಹಂಚಿಕೊಂಡಿದ್ದು ಅನೇಕರು ಮೆಚ್ಚಿಕೊಂಡಿದ್ದಾರೆ. ಕೋವಿಡ್ ಹಾಗೂ ಅದರ ನಂತರದ ವೇಳೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಸೋನು, ಸದ್ಯ ಫತೇಹ್ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT