ಮಂಗಳವಾರ, ಡಿಸೆಂಬರ್ 7, 2021
24 °C

ಗಾಳಿಪಟ-2 ಚಿತ್ರದ ಚಿತ್ರೀಕರಣ ಪೂರ್ಣ: ನಿರ್ದೇಶಕ ಯೋಗರಾಜ ಭಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಾಳಿಪಟ –2 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ನಿರ್ದೇಶಕ ಯೋಗರಾಜ ಭಟ್ ತಿಳಿಸಿದ್ದಾರೆ.

ಚಿತ್ರದ ಕುರಿತು ಫೇಸ್‌ಬುಕ್‌ನಲ್ಲಿ ಫೋಸ್ಟ್‌ ಮಾಡಿರುವ ಅವರು, ‘ನಮಸ್ತೆ, ಗಾಳಿಪಟ –2 ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಅತೀ ಶೀಘ್ರದಲ್ಲೇ ಬಾಕಿ ಸುದ್ದಿ..’ ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಯೋಗರಾಜ ಭಟ್ ಅವರು 2008ರಲ್ಲಿ ಕೊಟ್ಟ ಹಿಟ್ ಚಿತ್ರ ‘ಗಾಳಿಪಟ’. ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್, ಅನಂತ ನಾಗ್ ಅವರ ತಾರಾಗಣ ಇದ್ದ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಇದೀಗ ಭಟ್ಟರು ಎರಡನೆಯ ಬಾರಿಗೆ ಗಾಳಿಪಟ ಹಾರಿಸಲು ದಾರ ಹಿಡಿದು ನಿಂತಿದ್ದಾರೆ.

ಚಿತ್ರದ ನಾಯಕಿಯರಾಗಿ ವೈಭವಿ, ಸಂಯುಕ್ತ ಮೆನನ್, ಶರ್ಮಿಳಾ ಮಾಡ್ರೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ರಮೇಶ್ ರೆಡ್ಡಿ ಅವರು ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆಯಾಗಬೇಕಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

ಇವನ್ನೂ ಓದಿ...

ನಾಗಾರ್ಜುನಗೆ ಕಿಸ್ ಕೊಡೋಕೆ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟರಾ ಅಮಲಾ ಪೌಲ್‌?

ಚಿರಂಜೀವಿ ಸರ್ಜಾ ಮಗ ರಾಯನ್‌ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ

ಅನಸೂಯ ಬಟ್ಟೆ ಬಗ್ಗೆ ಶ್ರೀನಿವಾಸ ರಾವ್ ಟೀಕೆ: ನಟಿ ಬೆಂಬಲಕ್ಕೆ ನಿಂತ ಗೌರಿ ನಾಯ್ಡು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು