ಸೋಮವಾರ, ಅಕ್ಟೋಬರ್ 21, 2019
21 °C

ಪುನೀತ್ ರಾಜ್‌ಕುಮಾರ್ ಅಭಿನಯದ ’ಯುವರತ್ನ‘ ಟೀಸರ್ ಬಿಡುಗಡೆ

Published:
Updated:

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಸಿನಿಮಾ ಯುವರತ್ನ ಟೀಸರ್ ಬಿಡುಗಡೆಯಾಗಿದೆ. 

ಅಪ್ಪು ಸಿನಿಮಾದ ನಂತರ ಕಾಲೇಜು ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ಪುನೀತ್, ರಗ್ಬಿ ಆಟಗಾರನಾಗಿಯೂ ಇಲ್ಲಿ ಕಾಣಿಸಿಕೊಂಡಿದ್ದಾರೆ.

'ಈ ದುನಿಯಾದಲ್ಲಿ ಮೂರು ಥರ ಗಂಡಸರಿರುತ್ತಾರೆ. ರೂಲ್‌ನ ಫಾಲೋ ಮಾಡೋರು, ರೂಲ್‌ನ ಬ್ರೇಕ್ ಮಾಡೋರು, ಮೂರನೇಯವರು ನನ್ನ ಥರ ರೂಲ್ ಮಾಡೋರು' ಎಂಬ ಖಡಕ್ ಸಂಭಾಷಣೆ ಇಡೀ ಟೀಸರ್‌ ಅನ್ನು ಆವರಿಸಿಕೊಂಡಿದೆ. 

ಹೊಂಬಾಳೆ ಕ್ರಿಯೇಷನ್ ಬ್ಯಾನರ್ ಅಡಿ ವಿಜಯ್ ಕಿರಂಗದೂರು ಬಂಡವಾಳ ಹೂಡಿದ್ದಾರೆ. ಸಂತೋಷ್ ಆನಂದ ರಾಮ್ ಚಿತ್ರ ನಿರ್ದೇಶಿಸಿದ್ದಾರೆ.

ಸೋನುಗೌಡ, ‘ಡಾಲಿ’ ಧನಂಜಯ್, ಸಯೇಶಾ, ಪ್ರಕಾಶ್‌ ರಾಜ್, ವಸಿಷ್ಠ ಸಿಂಹ, ಸುಧಾರಾಣಿ, ಸಾಯಿಕುಮಾರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ತಾರಾಗಣದಲ್ಲಿದ್ದಾರೆ.

ಈಗಾಗಲೇ ಈ ಟೀಸರ್‌ ಅನ್ನು12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

Post Comments (+)