ಶುಕ್ರವಾರ, ಜನವರಿ 24, 2020
17 °C

ಯುವರತ್ನ ಸಿನಿಮಾದ ನ್ಯೂಲುಕ್‌: ಅಸ್ಥಿಪಂಜರ ಹೊತ್ತು ನಿಂತ ಪುನೀತ್‌ ರಾಜ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಸಿನಿಮಾದ ನ್ಯೂಲುಕ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗುತ್ತಿದೆ. ಹೊಸ ವರ್ಷಕ್ಕೆ ಪುನೀತ್ ತಮ್ಮ ಅಭಿಮಾನಿಗಳಿಗೆ ನ್ಯೂಲುಕ್‌ ಗಿಫ್ಟ್‌ ಕೊಟ್ಟಿದ್ದಾರೆ

ಪುನೀತ್​ ತಮ್ಮ ಹೆಗಲಿಗೆ ಅಸ್ಥಿಪಂಜರ ಹೊತ್ತು ನಿಂತಿದ್ದಾರೆ. ಪೊಸ್ಟರ್‌ ಬ್ಯಾಕ್​ಗ್ರೌಂಡ್​ನಲ್ಲಿ ಡೈನೋಸಾರದ ಅಸ್ಥಿಪಂಜರ ಇರುವುದು  ಕುತೂಹಲ ಮೂಡಿಸಿದೆ. 

ನಟಸಾರ್ವಭೌಮ ಚಿತ್ರದ ಬಳಿಕ ಪುನೀತ್‌ ನಟನೆಯ ‘ಯುವರತ್ನ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸಂತೋಷ್‌ ಆನಂದರಾಮ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಸಂತೋಷ್‌ ಆನಂದರಾಮ್‌ ಮತ್ತು ಪುನೀತ್‌ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ರಾಜಕುಮಾರ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಹಾಗಾಗಿಯೇ, ‘ಯುವರತ್ನ’ನ ಮೇಲೂ ನಿರೀಕ್ಷೆ ದು‍ಪ್ಪಟ್ಟಾಗಿದೆ.

ಶೈಕ್ಷಣಿಕ ರಂಗದಲ್ಲಿನ ಕಾರ್ಪೊರೇಟ್‌ ಸಂಸ್ಕೃತಿಯ ಸುತ್ತ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಇದರಲ್ಲಿ ನವಿರು ಪ್ರೇಮಕಥೆಯೂ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ಪುನೀತ್‌ ಸ್ಟೂಡೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರ್‌ ಬಂಡವಾಳ ಹೂಡಿದ್ದಾರೆ. ಎಸ್‌. ತಮನ್‌ ಸಂಗೀತ ಸಂಯೋಜಿಸಿದ್ದು ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು