ಗುರುವಾರ , ಏಪ್ರಿಲ್ 9, 2020
19 °C

ಹೊಸ ದಾಖಲೆ ಬರೆದ ಯುವರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಚಿತ್ರದ ಡೈಲಾಗ್‌ ಟೀಸರ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಸತತ 109 ಗಂಟೆ ಕಾಲ ಅಗ್ರಸ್ಥಾನ ಕಾಯ್ದುಕೊಂಡು ಹೊಸ ದಾಖಲೆ ಬರೆದಿದೆ. 

ಸಂತೋಷ್‌ ಆನಂದ್‌ರಾಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಯುವರತ್ನ’ದ ಡೈಲಾಗ್‌ ಟೀಸರ್‌ ಪುನೀತ್‌ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತ ಬಿಡುಗಡೆಯಾಗಿತ್ತು. ಎರಡು ದಿನಗಳಲ್ಲಿ ಈ ಟೀಸರ್‌ ಅನ್ನು ಸುಮಾರು 20 ಲಕ್ಷ ಜನರು ವೀಕ್ಷಿಸಿದ್ದು, ಈವರೆಗೆ ಸುಮಾರು 28 ಲಕ್ಷ ಜನರು ವೀಕ್ಷಿಸಿದ್ದಾರೆ. ಅಲ್ಲದೆ, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಟೀಸರ್‌ ಬಗ್ಗೆ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

‘ಗಂಡಸ್ತನ, ಚರ್ಬಿ, ಮೀಟರ್‌ ಇದೆಲ್ಲ ಇರುವನು ಒಬ್ಬ ಬೇಕು’, ಕಾಲೇಜಲ್ಲಿ ಹೊಡೆದಾಡಿ ಡಾನ್‌ ಆಗಬೇಕು ಅಂತಿದಿಯಾ?’ ಎನ್ನುವ ಡಾಲಿ ಧನಂಜಯ ಡೈಲಾಗ್‌ಗೆ ಪ್ರತಿಯಾಗಿ ‘ಸೀಟಿಗೆ ಹೊಡೆದಾಡುವನು ಡಾನ್‌, ಅದರ ಮೇಲೆ ಕುಳಿತುಕೊಳ್ಳುವನು...ನಾನು’ ಎಂದು ಕೌಂಟರ್‌ ಕೊಡುವ ‘ಯುವರತ್ನ’ನ ಡೈಲಾಗ್‌ ಸಖತ್ತಾಗಿದೆ. ಹಾಗೆಯೇ ನಾಯಕಿ ಸಯೇಷಾ ಸೆಹಗಲ್‌, ಪುನೀತ್‌ ನೋಡಿ ‘ನೀವು ನೋಡಲು ಅಣ್ಣಾವ್ರ ಥರನೇ ಇದೀರಾ’ ಎಂದು ಹೊಗಳಿದರೆ, ಪುನೀತ್‌ ಪ್ರತಿಯಾಗಿ ‘ಥ್ಯಾಂಕ್ಯು, ಆದರೆ, ನೀವು ನನ್ನನ್ನು ಅಣ್ಣ ಅನ್ಕೊಬೇಡಿ’ ಎಂದು ಕೊಡುವ ಚಮಕ್‌ ಡೈಲಾಗ್‌ಗಳು ಗಮನ ಸೆಳೆಯುತ್ತವೆ. ಈ ಟೀಸರ್‌ನಲ್ಲಿ ರೋಮಾಂಚನಕಾರಿ ಸಾಹಸ ದೃಶ್ಯಗಳು, ಮನಸ್ಸಿಗೆ ಖುಷಿ ಕೊಡುವ ಡಾನ್ಸ್‌, ಕಲರ್‌ಪುಲ್‌ ದೃಶ್ಯಗಳು ಭರಪೂರ ಇವೆ.

ಹಾಗೆಯೇ ಪುನೀತ್‌ ನಟಿಸುತ್ತಿರುವ ಇನ್ನೊಂದು ಬಹು ನಿರೀಕ್ಷೆಯ ‘ಜೇಮ್ಸ್‌’ ಚಿತ್ರದ ಮೋಷನ್‌ ಪೋಸ್ಟರ್‌ನ ವಿಡಿಯೊ ಕೂಡ ಭಾರಿ ಪ್ರಮಾಣದಲ್ಲಿ ಮೆಚ್ಚುಗೆ ಗಳಿಸಿಕೊಂಡಿದೆ. ಸಿನಿ ಪ್ರೇಕ್ಷಕರಿಗೆ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ‘ಕಷ್ಟ ಬಂದಾಗ ಹೆದುರ್ಕೋಳೊರು ಕಾಮನ್‌, ಎಲ್ಲನೂ ಎದುರಿಸಿ ಮುಂದೆ ನಿಲ್ಲೋನು ನಂಬರ್‌ 1’ ಒಕ್ಕಣೆಯಿಂದ ಜೇಮ್ಸ್‌ ಚಿತ್ರದ ಮೋಷನ್‌ ಪೋಸ್ಟರ್‌ ಶುರುವಾಗುತ್ತದೆ. ಕಾರಿನಲ್ಲಿ ಟ್ರಕ್‌ವೊಂದನ್ನು ಬೆನ್ನಟ್ಟಿ ಹೋಗುವ ಜೇಮ್ಸ್‌, ಅದನ್ನು ಸೇತುವೆ ಮೇಲೆ ಅಡ್ಡಗಟ್ಟಿ ಮೆಷಿನ್‌ ಗನ್ನಿನಿಂದ ಭಸ್ಮ ಮಾಡುವ ದೃಶ್ಯ ಸಿನಿ ರಸಿಕರಿಗೆ ಮುದ ನೀಡುವಂತಿದೆ. ಈ ಪೋಸ್ಟರ್‌ ಬಿಡುಗಡೆಯಾಗಿ 24 ತಾಸು ಕಳೆಯುವುದರೊಳಗೆ 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಸದ್ಯ 7 ಲಕ್ಷ ವೀಕ್ಷಣೆ ದಾಟಿದೆ. ‘ಜೇಮ್ಸ್’ಗೆ ‘ಬಹದ್ದೂರ್‌’ ಖ್ಯಾತಿಯ ಚೇತನ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.  v

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು