‘ದಂಗಲ್’ ಚಿತ್ರದಲ್ಲಿ ಕುಸ್ತಿಪಟು ಗೀತಾ ಪೋಗಟ್ ಅವರ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದವರುನಟಿ ಝೈರಾ ವಾಸೀಂ. ಅನಂತರ ಅವರು ‘ಸೀಕ್ರೆಟ್ ಸೂಪರ್‌ಸ್ಟಾರ್’ ಚಿತ್ರದಲ್ಲಿ ಗಾಯಕಿಯಾಗಿ ನಟಿಸಿದ್ದರು. ವಯಸ್ಸು ಬರೀ 17 ಆಗಿದ್ದರೂ, ಈಗಾಗಲೇ ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದು, ಅಭಿಮಾನಿಗಳ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ.

‘ದಂಗಲ್’ ಸಿನಿಮಾ ಚಿತ್ರೀಕರಣಕ್ಕೆ ಮುನ್ನ ಈ ಕಾಶ್ಮೀರಿ ಬೆಡಗಿ, ಸಿನಿಮಾದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಳ್ಳಲು ಕಠಿಣ ತರಬೇತಿ ಪಡೆದುಕೊಂಡಿದ್ದರು. ಗೀತಾ ಪೋಗಟ್‌ನ
ಬಾಲ್ಯದ ಪಾತ್ರದಲ್ಲಿ ನಟಿಸಬೇಕಾಗಿದ್ದರಿಂದ ಅವರು ಅದಕ್ಕಾಗಿ ಓಟ, ಕುಸ್ತಿ ಅಖಾಡದಲ್ಲಿ ತರಬೇತಿ ಪಡೆದಿದ್ದರು. ಆಗ ಅನೇಕ ಬಾರಿ ಗಾಯಗೊಂಡಿದ್ದರು. ‘ಈ ನೋವುಗಳೇ ನನ್ನನ್ನು ಗಟ್ಟಿಯಾಗಿಸಿತು’ ಎಂದು ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಇವಿಷ್ಟೇ ಅಲ್ಲ, ಸಿನಿಮಾಕ್ಕಾಗಿ ತೂಕ ಹೆಚ್ಚಾಗದಂತೆ ಸಮತೋಲಿತ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕಾಗಿತ್ತು. ಹೀಗಾಗಿ ಅವರುಡಯೆಟ್ ಆರಂಭಿಸಿದರು. ಆಗ ಆರಂಭಿಸಿದ ವರ್ಕೌಟ್ ಹಾಗೂ ಡಯೆಟ್ ಅನ್ನೇ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ.

ದುಂಡು ದುಂಡಗೆ ಮುದ್ದು ಮುದ್ದಾಗಿರುವ ಈ ನಟಿ ಫಿಟ್‌ನೆಸ್ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ. ದಿನಾ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವವರ ಸಾಲಿಗೂ ಇವರು ಸೇರುವುದಿಲ್ಲ. ಆದರೆ ನಟನಾ ವೃತ್ತಿಯಲ್ಲಿರುವುದರಿಂದ ಫಿಟ್ ಆಗಿರಲುವಾರದಲ್ಲಿ 5–6 ಗಂಟೆ ಕಾಲ ವ್ಯಾಯಾಮ ಮಾಡುತ್ತಾರೆ. ಯೋಗವನ್ನೂ ಮಾಡುತ್ತಾರೆ. ಬಿಡುವಿದ್ದಾಗ ಜಿಮ್‌ಗೆ ಹೋಗಿ ಟ್ರೆಡ್‌ಮಿಲ್ ಓಟ ಹಾಗೂ ಕಾರ್ಡಿಯೊ ವ್ಯಾಯಾಮಗಳನ್ನು ಮಾಡುತ್ತಾರೆ.

ಆಹಾರ ಸೇವನೆ ವಿಚಾರದಲ್ಲಿ ಮಾತ್ರ ಝೈರಾ ಕಟ್ಟುನಿಟ್ಟು. ಯಾವಾಗಲೂ ಮನೆಯೂಟಕ್ಕೆ ಆದ್ಯತೆ ನೀಡುತ್ತಾರೆ. ಇದು ಹೆಚ್ಚು ಆರೋಗ್ಯಕರ ಹಾಗೂ ದೇಹದ ತೂಕವನ್ನು ಹೆಚ್ಚು ಮಾಡುವುದಿಲ್ಲ ಎಂಬ ನಂಬಿಕೆ ಅವರದು. ಯಾವಾಗಲೂ ಚಟುವಟಿಕೆಯಿಂದಿರಲು ಹೆಚ್ಚು ತಾಜಾಹಣ್ಣುಗಳನ್ನು ತಿನ್ನುತ್ತಾರೆ. ಯಾವಾಗ ಹಸಿವಾಗುತ್ತೋ,
ಆಗ ಒಂದು ಬೌಲ್ ಹಣ್ಣುಗಳನ್ನು ಇವರು ತಿನ್ನುತ್ತಾರಂತೆ.

ಇವರ ರಾತ್ರಿಯೂಟ ಬಹಳ ಸರಳವಾಗಿರುತ್ತದೆ. ಚಪಾತಿ, ಪಲ್ಯ ಹಾಗೂ ಸ್ವಲ್ಪ ಹಣ್ಣುಗಳಷ್ಟೇ. ಆದರೆಪ್ರತಿದಿನಸೂಪ್ ಇದ್ದೇ ಇರುತ್ತದೆ. ಕೊಬ್ಬಿನಂಶ ಕಡಿಮೆ ಇರುವ ಹಾಲು, ಟೋಸ್ಟ್, ಪ್ರೊಟೀನ್ ಶೇಕ್‌ಗಳು, ಹಣ್ಣುಗಳು, ರೋಟಿ, ಹಸಿ ತರಕಾರಿಗಳು ಇವರ ಡಯೆಟ್ ಪಟ್ಟಿಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.