ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಂಕ್ಷಾ.ಕನಸು...

Last Updated 14 ಮಾರ್ಚ್ 2012, 19:30 IST
ಅಕ್ಷರ ಗಾತ್ರ

`ಒಲವೇ ಮಂದಾರ~ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಆಕಾಂಕ್ಷಾ ಮನ್‌ಸುಖಾನಿಗೆ ಇದೀಗ ಒಂದಾದ ಮೇಲೊಂದರಂತೆ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆಯಂತೆ.

ಜಿಂಕೆ ಕಂಗಳ, ನೀಳ ಮೈಕಟ್ಟಿನ, ಮೃದು ನಗೆಯ ದುಬೈ ಮೂಲದ ಈ ಚೆಲುವೆಗೆ ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಿನಿಮಾಗಳೆಂದರೆ ಅಚ್ಚುಮೆಚ್ಚು. ಈ ವಿಷಯವಾಗಿ ಇದುವರೆಗೂ  ನಟಿಸಿರುವ ಸಿನಿಮಾಗಳಲ್ಲಿ ತೃಪ್ತಿ ದೊರೆತಿದೆ ಎನ್ನುತ್ತಾರೆ ಆಕಾಂಕ್ಷಾ.

ಕನ್ನಡ ಚಿತ್ರರಂಗದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುವ ಕನಸು ಹೊತ್ತಿರುವ ಆಕಾಂಕ್ಷಾ ಕನ್ನಡ ಚಿತ್ರರಂಗ ಮತ್ತು ಕನ್ನಡಿಗರಿಂದ ತನ್ನ ನಟನೆ ಕುರಿತು ಉತ್ತಮ ಪ್ರತಿಕ್ರಿಯೆ ದೊರೆತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ಇಷ್ಟು ಬೇಗನೆ ನನ್ನನ್ನು ಸ್ವೀಕರಿಸುತ್ತಾರೆ ಎಂದು ನಂಬಿಕೆಯಿರಲಿಲ್ಲ, ಆದರೆ ಇದು ಸಾಧ್ಯವಾಯಿತು.

ನನಗೆ ನಟಿಯಾಗುವ ಹಂಬಲವಿತ್ತು. ಆದರೆ ಒಳ್ಳೆಯ ಬ್ರೇಕ್‌ಗಾಗಿ ಕಾಯುತ್ತಿದ್ದೆ. ಒಲವೇ ಮಂದಾರ ಚಿತ್ರಕ್ಕೆ ಸಹಿ ಹಾಕುವಾಗ ನಿಜಕ್ಕೂ ಈ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ, ಆದರೆ ಉತ್ತಮ ಚಿತ್ರಕಥೆ ಇದಾದ್ದರಿಂದ ನನಗೆ ಮೆಚ್ಚುಗೆಯಾಯಿತು ಎನ್ನುತ್ತಾರೆ.

ದುಬೈನಲ್ಲಿ ಹುಟ್ಟಿ ಬೆಳೆದರೂ ದಕ್ಷಿಣ ಭಾರತದೊಂದಿಗೆ ಏನೊ ಒಂದು ನಂಟು ಇರುವಂತೆ ಭಾಸವಾಗುತ್ತಿತ್ತು. ಕೇರಳದಲ್ಲಿ ಚಿನ್ನಾಭರಣಗಳಿಗೆ ರೂಪದರ್ಶಿಯಾಗಿದ್ದುದು ಇದಕ್ಕೆ ಮುಖ್ಯ ಕಾರಣ.

ದುಬೈನಲ್ಲಿ ಚಿನ್ನದ ಆಭರಣಗಳಿಗೆ ರೂಪದರ್ಶಿಯಾಗಿದ್ದಾಗ ಎಲ್ಲರೂ ನನ್ನನ್ನು ದಕ್ಷಿಣ ಭಾರತದವಳು ಎಂದು ಗುರುತಿಸುತ್ತಿದ್ದರು. ಇದೇ ನನಗೆ ಇಲ್ಲಿ ನಂಟು ಬೆಸೆಯಲು ಮೂಲವಾಯಿತು ಎನ್ನುತ್ತಾರೆ.

ದುಬೈನಂತಹ ಸ್ಥಳದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ನೀವು ಎದುರಿಸಿದ್ದ ಸವಾಲುಗಳೇನು ಎಂಬುದಕ್ಕೆ, ನಿಜಕ್ಕೂ ಮಾಡೆಲಿಂಗ್ ಅತ್ಯಂತ ಸುಲಭವೆನಿಸಿತ್ತು. ದುಬೈನಲ್ಲಿ ಮಾಡೆಲಿಂಗ್‌ಗೆಂದು ಕೆಲವೇ ಸಂಸ್ಥೆಗಳಿದ್ದವು. ಅಷ್ಟೇ ಅಲ್ಲ, ರೂಪದರ್ಶಿಗಳೂ ಕಡಿಮೆ ಇದ್ದರು. ಆದ್ದರಿಂದ ಸಂಸ್ಥೆಗಳು ಮತ್ತು ನಾನು ಒಟ್ಟೊಟ್ಟಿಗೆ ಬೆಳೆದೆವು ಎನ್ನುತ್ತಾರೆ ಆಕಾಂಕ್ಷಾ. 

ಸುಮನಾ ಕಿತ್ತೂರು ನಿರ್ದೇಶನದ `ಎದೆಗಾರಿಕೆ~ ಚಿತ್ರಕ್ಕೆ ಭಾವನಾ ಅವರ ಜಾಗಕ್ಕೆ ಈಗ ಆಕಾಂಕ್ಷಾ ನಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಸುಮನಾ `ಎದೆಗಾರಿಕೆ~ ಸಿನಿಮಾಗೆ ಕರೆ ನೀಡಿದಾಗ, ಈ ಚಿತ್ರಕ್ಕೆ ನೀವು ಮೊದಲ ಆಯ್ಕೆಯಲ್ಲ ಎಂದರು. ಆದರೆ ನನಗೆ ಏನೂ ಅನ್ನಿಸಲಿಲ್ಲ, ಒಳ್ಳೆಯ ಚಿತ್ರ ಮತ್ತು ಉತ್ತಮ ಪಾತ್ರ ಮಾತ್ರ ನನಗೆ ಮುಖ್ಯ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ ಆಕಾಂಕ್ಷಾ.

ರವಿ ಶ್ರೀವತ್ಸ ಅವರ `ದಶಮುಖ~ ಚಿತ್ರದಲ್ಲಿಯೂ ಕೂಡ ರವಿಚಂದ್ರನ್ ಜೊತೆಗೆ ನಟಿಸಲಿದ್ದಾರೆ. ಚಿತ್ರದಲ್ಲಿ ಆಕಾಂಕ್ಷಾ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಅಂಗವಿಕಲೆಯ ಪಾತ್ರ ಮಾಡಿದ್ದೇನೆ. ಚಿತ್ರ ನಟಿ ಅವಲಂಬಿತವಾಗಿಲ್ಲ. ಆದರೆ ವಿಭಿನ್ನ ಪಾತ್ರವಿದೆ. ಆದ್ದರಿಂದ ಚಿತ್ರ ಆಸಕ್ತಿದಾಯಕವಾಗಿದೆ ಎಂದರು.

ಒಬ್ಬ ರೂಪದರ್ಶಿಯಾಗಿ ಸೌಂದರ್ಯ ಪ್ರದರ್ಶನದ ಚಿತ್ರವೇ ಮುಖ್ಯ ಎಂದು ನಿಮಗನ್ನಿಸುವುದಿಲ್ಲವೆ ಎಂಬ ಪ್ರಶ್ನೆಗೆ ನಗುತ್ತಾ, ಇಲ್ಲವೆ ಇಲ್ಲ. ನಾನು ನನ್ನ ನಟನಾ ಸಾಮರ್ಥ್ಯವನ್ನು ನಿರೂಪಿಸುವ ಯಾವ ಪಾತ್ರವನ್ನೂ ಮಾಡಲು ಸಿದ್ಧವಿದ್ದೇನೆ.

ಚಿತ್ರರಂಗದಲ್ಲಿ ನಾನು ನಡೆವ ಹಾದಿ ಬೇಕಾದಷ್ಟಿದೆ. ಈಗ ಜನರು ನನ್ನನ್ನು ಉತ್ತಮ ನಟಿಯೆಂದು ಗುರುತಿಸಿದರೆ ಸಾಕು ಎಂದು ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT