ಪ್ರಯೋಗದ ನಿಕಷಕ್ಕೆ ಜಗ್ಗೇಶ್ ಮತ್ತೆ ಬೆನ್ನುಮಾಡಿದ್ದಾರಾ? ಅಂಥದೊಂದು ಅನುಮಾನಕ್ಕೆ ಇಂಬುಗೊಡುವ ಸಿನಿಮಾ ಒಪ್ಪಿಕೊಂಡು, ಅವರು ಬಣ್ಣ ಹಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ. ಚಿತ್ರದ ಹೆಸರು ‘ಡಬಲ್ ಡಕ್ಕರ್’. ಇದು ‘ಹನಿಮೂನ್ ಎಕ್ಸ್‌ಪ್ರೆಸ್’ ಶೈಲಿಯದ್ದೇ ಚಿತ್ರ ಇರಬಹುದಾ ಎಂಬ ಅನುಮಾನವನ್ನು ಹುಟ್ಟಿಸುವಂತಿದೆ ಶೀರ್ಷಿಕೆ.

ತೆಲುಗಿನಲ್ಲಿ ರಾಜೇಂದ್ರ ಬಾಬು ನಟಿಸಿದ್ದ ‘ಮೀ ಶ್ರೇಯಾಭಿಲಾಷಿ’ ಚಿತ್ರದ ರೀಮೇಕ್ ‘ಲಿಫ್ಟ್ ಕೊಡ್ಲಾ’ ಕೈಗೆತ್ತಿಕೊಳ್ಳುವ ಮೂಲಕ ಜಗ್ಗೇಶ್ ತಮ್ಮ ಹಾಸ್ಯದ ದಿಕ್ಕನ್ನು ತುಸು ಬದಲಿಸುವ ಉಮೇದನ್ನು ತೋರಿದ್ದರು. ಅದು ನಿರೀಕ್ಷೆಗೆ ತಕ್ಕ ಫಲ ನೀಡಲಿಲ್ಲ. ಬಹುಶಃ ಅದೇ ಕಾರಣಕ್ಕೋ ಏನೋ ಜಗ್ಗೇಶ್ ಈಗ ‘ಡಬಲ್ ಡಕ್ಕರ್’ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಒಬ್ಬ ಗಂಡ-ಇಬ್ಬರು ಹೆಂಡತಿಯರ ಕತೆಯ ಸಿನಿಮಾ ‘ಡಬಲ್ ಡಕ್ಕರ್’. ವೆಲ್ಲೂರಿನ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಶ್ರೀನಿವಾಸ ಹಾಗೂ ಸಂಪತ್ ಎಂಬ ಹಳೆಯ ಗೆಳೆಯರ ಜೊತೆಗೆ ಹೋಗಿದ್ದಾಗ ಚಿತ್ರದ ಎಳೆಯ ಪ್ರಸ್ತಾಪವಾಯಿತಂತೆ. ಶ್ರೀನಿವಾಸ ದೇವರು ಇಬ್ಬರು ಪತ್ನಿಯರನ್ನು ಅದು ಹೇಗೆ ಸಂಭಾಳಿಸುವನೋ ಎಂದು ಚಟಾಕಿ ಹಾರಿಸುವ ಧಾಟಿಯಲ್ಲಿ ಮಾತನಾಡಿದರೋ ಏನೋ, ಜಗ್ಗೇಶ್ ಮನಸ್ಸಿನಲ್ಲಿ ಅದೇ ಕತೆಯಾಗಿ ಜನ್ಮ ತಳೆದಿದೆ.

‘ಲಿಫ್ಟ್ ಕೊಡ್ಲಾ’ ನಂತರ ಜಗ್ಗೇಶ್ ಸಿನಿಮಾಗೆ ಅಲ್ಪವಿರಾಮ ಹಾಕಿದ್ದರು. ಇದು ಪ್ರಜ್ಞಾಪೂರ್ವಕ ನಿರ್ಧಾರವೇನೂ ಆಗಿರಲಿಲ್ಲ. ಗ್ಯಾಪ್‌ನಲ್ಲಿ ಎಂಟು ಕತೆಗಳನ್ನು ಹಲವರು ಬಂದು ಕೇಳಿಸಿದರಂತೆ. ಆದರೆ, ಜಗ್ಗೇಶ್‌ಗೆ ಒಂದೂ ಹಿಡಿಸಿಲ್ಲ. ಲಕ್ಷ್ಮೀನಾರಾಯಣನ ಸನ್ನಿಧಿಯಲ್ಲಿ ಗೆಳೆಯ ಶ್ರೀನಿವಾಸ ಹೇಳಿದ ಕತೆಯೇ ಮನಸ್ಸಿಗೆ ತಾಕಿದ್ದು.

ಶ್ರದ್ಧಾ ಆರ್ಯ ಹಾಗೂ ಅದಿತಿ ಗೌತಮಿ ಜಗ್ಗೇಶ್‌ಗೆ ಜೋಡಿಯಾಗಿದ್ದಾರೆ. ಈ ಇಬ್ಬರೂ ನಟಿಯರು ‘ಮದುವೆ ಮನೆ’ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಜಗ್ಗೇಶ್ ಕಾಮಿಡಿ ಹಳಿ ಮೇಲೆ ಅವರೂ ಜೊತೆಯಾಗಿದ್ದಾರೆ. ‘ರಾಜೇಂದ್ರ ಕಾರಂತರ ಸಂಭಾಷಣೆ ಕೇಳಿ ನಗದೇ ಇರಲು ಸಾಧ್ಯವೇ ಇಲ್ಲ’ ಎನ್ನುವ ಮೂಲಕ ಜಗ್ಗೇಶ್ ಚಿತ್ರ ಸಂಪೂರ್ಣ ಹಾಸ್ಯಮಯ ಎಂಬ ಖಾತರಿಯನ್ನು ಕೊಟ್ಟರು.

ವಿಕ್ಟರಿ ವಾಸು ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಲಿದ್ದಾರೆ. ರಫ್ತು ವ್ಯಾಪಾರದಲ್ಲಿ ತೊಡಗಿಕೊಂಡಿರುವ ಶ್ರೀನಿವಾಸ್ ಹಣ ಹೂಡಲಿದ್ದಾರೆ.
‘ಲಿಫ್ಟ್ ಕೊಡ್ಲಾ’ ಚಿತ್ರಕ್ಕೆ ಸಂಗೀತ ನೀಡಿದ್ದ ಜೈಪಾಲ್ ಅವರಿಗೇ ಈ ಸಿನಿಮಾದಲ್ಲೂ ಸಂಗೀತ ಸಂಯೋಜನೆ ಮಾಡುವ ಅವಕಾಶ ಸಿಕ್ಕಿದೆ.

ಸ್ವಾಮೀಜಿ ಪಾತ್ರದಲ್ಲಿ ಸುದರ್ಶನ್ ನಟಿಸಲಿದ್ದಾರೆ. ಈ ಚಿತ್ರ ಗೆಲ್ಲಲಿದೆ ಎಂಬ ವಿಶ್ವಾಸ ತಮಗೆ ಈಗಾಗಲೇ ಮೂಡಿದೆ ಎಂದು ಜಗ್ಗೇಶ್ ಕೊನೆಯಲ್ಲಿ ಮಾತು ಸೇರಿಸಿದರು. ಇಂಥ ವಸ್ತುಗಳ ಸಿನಿಮಾಗಳು ಸೋತ ಉದಾಹರಣೆಗಳೂ ಕಡಿಮೆಯೇ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.