`ಲೈಫು ಇಷ್ಟೇನೆ~
ಪವನ್ ಕುಮಾರ್ ನಿರ್ದೇಶನದಲ್ಲಿ ದಿಗಂತ್ ನಾಯಕರಾಗಿ ಅಭಿನಯಿಸಿರುವ ಚಿತ್ರ `ಲೈಫು ಇಷ್ಟೇನೆ~. ಸಂಯುಕ್ತಾ ಹೊರನಾಡು ಹಾಗೂ ಸಿಂಧು ನಾಯಕಿಯರಾಗಿ ಅಭಿನಯಿಸಿದ್ದಾರೆ. ರಮ್ಯಾ ಬಾರ್ನ, ಚೆರ‌್ರಿ, ಸೋನು ಮುಂತಾದವರು ಚಿತ್ರಭೂಮಿಕೆಯಲ್ಲಿದ್ದಾರೆ. ಮನೋಮೂರ್ತಿ ಸಂಗೀತಕ್ಕೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಜ್ಞಾನಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ.

`ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ~
ಸೌರವ್‌ಬಾಬು ಬಂಡವಾಳ ಹೂಡಿ ನಾಯಕರಾಗಿ ನಟಿಸಿರುವ ಚಿತ್ರ `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ~. ಗೋಪಿ ಪೀಣ್ಯ ಚಿತ್ರದ ನಿರ್ದೇಶಕರು. ಭಾರತದ ಹಲವೆಡೆ ಮತ್ತು ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.
ಮದನ್-ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತಾರಾಬಳಗದಲ್ಲಿ ಶ್ರೀರಾಜ್, ಯಜ್ಞಾಶೆಟ್ಟಿ, ರೀನಾ ಮೆಹ್ತಾ, ದತ್ತಣ್ಣ, ಪದ್ಮಾಕುಮುಟಾ, ಅಮರನಾಥ್‌ಗೌಡ, ತುಮಕೂರು ದಯಾನಂದ್ ನಟಿಸಿದ್ದಾರೆ.

`ತಂತ್ರ~
ಮೋಹನ್ ಕೃಷ್ಣ ನಿರ್ಮಾಣದ ಚಿತ್ರ `ತಂತ್ರ~ಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಕಂಪ್ಯೂಟರ್ ಲೋಕದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧವನ್ನು ಕಥಾವಸ್ತುವನ್ನಾಗಿರಿಸಿಕೊಂಡಿರುವ ಈ ಚಿತ್ರದಲ್ಲಿ ಗಿರೀಶ್ ಮಟ್ಟಣ್ಣನವರ್, ನವ್ಯ ನಟರಾಜ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಕಥೆ ಚಿತ್ರಕಥೆ ನಿರ್ದೇಶನ ಬಾಲಾಜಿ ಅವರದ್ದು. ಅಶೋಕ್ ಜಂಬೆ ಸಂಗೀತ ನೀಡಿದ್ದು, ಶಂಕರ್ ಛಾಯಾಗ್ರಹಣ ಮಾಡಿದ್ದಾರೆ. ಸಹನಿರ್ದೇಶಕ ಅಶ್ವಿನ್ ಕುಮಾರ್ ಸಂಭಾಷಣೆಯನ್ನೂ ಬರೆದಿದ್ದಾರೆ. ಪ್ರಮೋದ್ ಚಕ್ರವರ್ತಿ, ಸಂತೋಷ, ಸಿದ್ದರಾಜು, ಆಶಾ, ಬಿರಾದಾರ್, ಪ್ರಣವ ಮೂರ್ತಿ, ಮಿಮಿಕ್ರಿ ರಾಜಗೋಪಾಲ್, ಕು. ಕಲ್ಯಾಣಕರ್, ತೇಜಸ್ವಿನಿ, ರಶ್ಮಿ ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.