`ಡವ್~ ಎಂದರೆ ಕೆಟ್ಟ ಅರ್ಥವಲ್ಲ. ಅದು ಶಾಂತಿಯ ಸಂಕೇತವಾದ ಪಾರಿವಾಳವಷ್ಟೇ ಎಂದು ಸಮರ್ಥನೆ ನೀಡಿದರು ನಿರ್ಮಾಪಕ ಬಿ.ಕೆ.ಶ್ರೀನಿವಾಸ್. `ಅಲೆಮಾರಿ~ ಚಿತ್ರ ಬಿಡುಗಡೆಗೂ ಮುನ್ನವೇ ಶ್ರೀನಿವಾಸ್ ಅದೇ ಚಿತ್ರತಂಡದೊಂದಿಗೆ ಹೊಸ ಚಿತ್ರವೊಂದರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅದರ ಹೆಸರು `ಡವ್~. ಇದೇ ಚಿತ್ರತಂಡದೊಂದಿಗೆ `ಅಡ್ಡಾ~ ಸಿನಿಮಾ ನಿರ್ಮಾಣ ಮಾಡುವುದಾಗಿ ಶ್ರೀನಿವಾಸ್ ಈ ಹಿಂದೆಯೇ ಹೇಳಿದ್ದರು. ಆದರೆ ಆ ಚಿತ್ರ ಸೆಟ್ಟೇರುವುದು `ಡವ್~ ಮುಗಿದ ಬಳಿಕವಂತೆ.

ಶೀರ್ಷಿಕೆ ಬೇರೆ ಅರ್ಥ ಕೊಡುವುದಿಲ್ಲವೇ ಎಂಬ ಪ್ರಶ್ನೆ ಎದುರಾದಾಗ `ಇದು ಕೆಟ್ಟ ಅರ್ಥ ನೀಡುವ ಶಬ್ದವಲ್ಲ. ಡವ್ ಅಂದರೆ ಪಾರಿವಾಳ. ಆಕರ್ಷಕವಾಗಿರಲಿ ಎಂದು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೇವೆ~ ಎಂಬುದು ಅವರ ಸಮರ್ಥನೆ.

ಆ್ಯಕ್ಷನ್ ಕಟ್ ಹೇಳುವ ಜೊತೆಯಲ್ಲಿ `ಡವ್~ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲದರ ಜವಾಬ್ದಾರಿಯನ್ನೂ ಹೊತ್ತಿರುವವರು ಸಂತು. `ಅಲೆಮಾರಿ~ಯ ಅದೃಷ್ಟ ಪರೀಕ್ಷೆಗೆ ಕಾದು ಕುಳಿತಿರುವ ಅವರು ಚಿತ್ರದ ಬಿಡುಗಡೆಗೂ ಮುನ್ನವೇ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಪ್ರಕಾರ ಪ್ರೀತಿ ಎಷ್ಟು ಅಮರ, ಮಧುರವಾಗಿರುತ್ತದೆಯೋ ಅಷ್ಟೇ ಅಪಾಯಕಾರಿ ಕೂಡ. ಅದು ಎಂತಹ ಕೆಲಸಕ್ಕೂ ಮುಂದಾಗುವಂತೆ ಪ್ರೇಮಿಗಳನ್ನು ಪ್ರೇರೇಪಿಸುತ್ತದೆ. ಪ್ರೀತಿಯ ಒಂದು ಮುಖವನ್ನಷ್ಟೇ ನಾವು ಚಿತ್ರಗಳಲ್ಲಿ ನೋಡುತ್ತಿದ್ದೇವೆ. ಆದರೆ ಅದರ ಹಿಂದಿರುವ ಪ್ರಾಕ್ಟಿಕಲ್ ವಿಚಾರಗಳನ್ನು ಈ ಚಿತ್ರ ತೆರೆದಿಡಲಿದೆ ಎಂದರು.

ಪ್ರೇಮ ವೈಫಲ್ಯ ಅನುಭವಿಸಿದ ಹುಡುಗಿ ನೂರಾರು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅನೇಕ ಒತ್ತಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಕಂಡಿದ್ದ, ಕೇಳಿದ್ದ ನೈಜ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ ಎಂದು ವಿವರಿಸಿದರು.

ಅಂದಹಾಗೆ ಚಿತ್ರಕ್ಕೆ ಇನ್ನೂ ನಾಯಕ ನಾಯಕಿಯ ಆಯ್ಕೆ ಮಾಡಿಲ್ಲ. ನಾಯಕನ ಆಯ್ಕೆ ಚಿತ್ರತಂಡಕ್ಕಿರುವ ದೊಡ್ಡ ಸಮಸ್ಯೆ. ಏಕೆಂದರೆ ಚಿತ್ರದ ಕಥೆಗೆ ಅನುಗುಣವಾಗಿ ತನ್ನ ದೇಹಭಾಷೆ ಬದಲಿಸಿಕೊಳ್ಳುವಷ್ಟು ಸಮಯಾವಕಾಶ ನೀಡುವ ನಟ ಬೇಕು. ಸುಮಾರು ಆರು ತಿಂಗಳು ಬೇರೆ ಚಿತ್ರ ಒಪ್ಪಿಕೊಳ್ಳುವಂತಿಲ್ಲ. ಈ ಕರಾರುಗಳಿಗೆ ಒಪ್ಪಿಗೆ ಸೂಚಿಸುವ ಜನಪ್ರಿಯ ನಟರನ್ನೇ ಆಯ್ಕೆ ಮಾಡಿಕೊಳ್ಳುವುದು ಚಿತ್ರತಂಡದ ಗುರಿ. ಚಿತ್ರಕ್ಕೆ ಮತ್ತೊಂದು ನಾಯಕ ನಾಯಕಿ ಜೋಡಿಯ ಅಗತ್ಯವಿದೆ. ಈ ಜೋಡಿಗೆ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಬೇಕೆನ್ನುವುದು ಸಂತು ಉದ್ದೇಶ. ಹೀಗಾಗಿ ಚಿತ್ರತಂಡ ವಿವಿಧ ಕಾಲೇಜುಗಳಿಗೆ ತೆರಳಿ ಹುಡುಕಾಟ ನಡೆಸಲಿದೆ.

ಚಿತ್ರದಲ್ಲಿ ಆರು ಹಾಡುಗಳಿವೆ. ಈ ಎಲ್ಲಾ ಹಾಡುಗಳಿಗೂ ಸಂಗೀತ ನೀಡುತ್ತಿರುವವರು ಅರ್ಜುನ್ ಜನ್ಯ. ಚಿತ್ರ ಸೆಟ್ಟೇರುವ ಮುನ್ನವೇ ಹಾಡುಗಳನ್ನು ಸಂಪೂರ್ಣವಾಗಿ ಸಿದ್ಧಗೊಳಿಸುವುದು ಅವರ ಬಯಕೆ. ಹಾಡುಗಳ ಧ್ವನಿಮುದ್ರಣ ಈಗಾಗಲೇ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.