‘ಜೂನಿಯರ್ ಅಕ್ಕಿನೇನಿ’ ಅಖಿಲ್ ಮತ್ತು ನಿಧಿ ಅಗರ್‌ವಾಲ್ ಜೋಡಿ ಹೊಸ ವರ್ಷದ ಆರಂಭದಲ್ಲೇ ಬಾಕ್ಸಾಫೀಸ್‌ನಲ್ಲಿ ತಮ್ಮ ಖಾತೆ ತೆರೆಯಲಿದ್ದಾರೆ. ಈ ಜೋಡಿಗೂ, ನಿರ್ದೇಶಕ ವೆಂಕಿ ಅಲ್ಲುರಿ ಅವರಿಗೂ ಬಹು ನಿರೀಕ್ಷೆಯ ಚಿತ್ರವಾದ‘ಮಿ.ಮಜ್ನು’ ಜನವರಿ ಅಥವಾ ಫೆಬ್ರುವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

‘ಮಿ.ಮಜ್ನು’ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ತಮಗಿದೆ ಎಂದು ಸಂಗೀತ ನಿರ್ದೇಶಕ ತಮನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಇತ್ತೀಚೆಗೆ ತಮನ್ ಹಾಗೂ ಅಖಿಲ್ ವಿಶಾಖಪಟ್ಟಣದ ಗೀತಂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದ ಫೋಟೊಗಳನ್ನು ಪೋಸ್ಟ್ ಮಾಡಿದ್ದ ಟಾಲಿವುಡ್‌ನ ಈ ಸಂಗೀತ ಮಾಂತ್ರಿಕ ‘ಇದು ಗೀತಂ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಚಿತ್ರ. ನಮ್ಮ‘ಮಿ.ಮಜ್ನು’ ಸಿನಿಮಾದ ಮೊದಲ ಹಾಡು ನಿಮ್ಮ ಮನಗೆಲ್ಲಲು ರೆಡಿಯಾಗಿದೆ. ಈ ಹಾಡನ್ನು ಸ್ವಾಗತಿಸಲು ಸಿದ್ಧರಾಗಿ. ಈ ಹಾಡನ್ನು ಎಲ್ಲಾ ಅದ್ಭುತ ಸಂಗೀತಗಾರರಿಗೆ ಅರ್ಪಿಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.

ಸಿನಿಮಾದ ಬಗ್ಗೆ ನಾಯಕ ಜ್ಯೂನಿಯರ್ ಅಕ್ಕಿನೇನಿ ಕೂಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬರೆದುಕೊಂಡಿದ್ದರು– ‘ಗುಡ್ ಮಾರ್ನಿಂಗ್, ಮಿ. ಮಜ್ನು ಕೊನೆಯ ಹಂತದ ಕೆಲಸಗಳು ಭರದಿಂದ ಸಾಗಿವೆ. ಹಾಡುಗಳು ಜನವರಿಯಲ್ಲಿ ನಿಮ್ಮ ಕಿವಿ ಮುಟ್ಟಲಿವೆ. ಇಷ್ಟು ದಿನ ತಾಳ್ಮೆಯಿಂದ ಕಾದಿದ್ದಕ್ಕೆ ಧನ್ಯವಾದಗಳು. ಈಗ ಸಿನಿಮಾದ ಬಗ್ಗೆ ಮಾತನಾಡಲು ಅವಕಾಶ ಕೂಡಿ ಬಂದಿದೆ‘ ಎಂದು ಸಂತಸ ಹಂಚಿಕೊಂಡಿದ್ದರು.

ಹಿಟ್ ಸಿನಿಮಾಗಳಾದ ಭಾಗಮತಿ, ತೊಲಿ ಪ್ರೇಮ, ಅರವಿಂದ ಸಮೇತ ವೀರ ರಾಘವ ಸಿನಿಮಾಗಳಿಗೆ ತಮನ್ ಸಂಗೀತ ನಿರ್ದೇಶನ ಮಾಡಿದ್ದು ಸಂಗೀತಪ್ರಿಯರ ಮನ ಗೆದ್ದಿದ್ದಾರೆ. ಈ ಚಿತ್ರ ತಮನ್‌ಗೆ ಯಾವ ರೀತಿ ಹೆಸರು ತಂದುಕೊಡುತ್ತದೆ ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.