ಹಾಸ್ಯ ಕಲಾವಿದರಾಗಿ ಬಂದ ಹಲವರು ನಾಯಕ ಪಾತ್ರಕ್ಕೆ ಬಡ್ತಿ ಪಡೆದ ಉದಾಹರಣೆಗಳು ಸಾಕಷ್ಟಿವೆ. ನರಸಿಂಹರಾಜು, ದ್ವಾರಕೀಶ್, ದ್ವಾರಕೀಶ್, ಶರಣ್, ಕೋಮಲ್‌ಕುಮಾರ್ ಮೊನ್ನೆಯಷ್ಟೇ ಬಂದ ಶಿವರಾಜ್.ಕೆ.ಆರ್.ಪೇಟೆ ವರೆಗೆ ಹಲವರು ನಾಯಕ ಪಾತ್ರದಲ್ಲಿ ಮಿಂಚಿದ್ದಾರೆ.

ಆ ಸಾಲಿಗೆ ಕೆಂಪೇಗೌಡ ಸೇರ್ಪಡೆಯಾಗುತ್ತಾರೆ. ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಇವರು, ಸದ್ಯ ‘ಕಟ್ಲೆ’ ಸಿನಿಮಾಕ್ಕೆ ನಾಯಕ ಆಗುತ್ತಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಎಸ್.ಎಸ್.ವಿಧಾ. ಹೊಸಕೋಟೆ ಮೂಲದ ಭರತ್‌ಗೌಡ ಎಂಬುವವರು ಬಂಡವಾಳ ಹೂಡುತ್ತಿದ್ದಾರೆ. ಮಂಚೂಣಿ ರಾಜಕೀಯ ಪಕ್ಷದ ಕಾರ್ಯಕರ್ತ, ಸಮಾಜ ಸೇವಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಭರತ್ ಗೌಡ ಸಿನಿಮಾಕ್ಕೆ ಕಾಲಿಡುತ್ತಿದ್ದಾರೆ.

ವೈಜ್ಞಾನಿಕ ಕಾಲ್ಪನಿಕ ಕತೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇರಲಿದೆ. ಹಳೆಗನ್ನಡ ಶೀರ್ಷಿಕೆಯಾಗಿದ್ದು, ಅಡಿಬರಹದಲ್ಲಿ ಅವಧಿ ಎಂದು ಬರೆಯಲಾಗಿದೆ. ಪ್ರತಿ ಮನುಷ್ಯನಿಗೂ ಸಮಯ ಎನ್ನುವುದು ಇರುತ್ತದೆ. ಮನುಷ್ಯನ ಸಾವು ದೇಹಕ್ಕೆ ಮಾತ್ರ. ಆತ್ಮಕ್ಕೆ ಇರುವುದಿಲ್ಲ. ದೇಹವು ಪಂಚಭೂತಗಳಲ್ಲಿ ವಿಲೀನ ಆಗುತ್ತದೆ. ಆತ್ಮಕ್ಕೆ ಪುನರಪಿ ಮರಣಂ, ಪುನರಪಿ ಜನನಂ ಎಂದು ಹೇಳುತ್ತಾರೆ. ವಿಜ್ಘಾನಿ ಪ್ರಕಾರ ವೈಜ್ಞಾನಿಕ ನಿಜ. ಹಾಗೆಯೇ ವೇದಗಳ ಪ್ರಕಾರ ನಾವು ನೋಡುತ್ತಿರುವ ಪಂಚಭೂತ ಶಕ್ತಿಗಳು ದಿಟ. ಎರಡಕ್ಕೂ ಎಲ್ಲೋ ಒಂದು ಕಡೆ ಸಂಬಂಧ ಇದೆ. ಅದು ಹೇಗೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಪ್ರಸಕ್ತ ಯುವ ಜನಾಂಗವು ಅರಿವಿದ್ದರೂ ತಪ್ಪುಗಳಿಗೆ ಶರಣಾಗುತ್ತಿದ್ದಾರೆ. ಇಂತಹ ಅನೀತಿಗಳನ್ನು ಮಾಡಬಾರದೆಂದು ತೂಕದ ಸಂದೇಶದ ಮೂಲಕ ಹೇಳಲಾಗಿದೆ ಎಂದಿದೆ ಚಿತ್ರ ತಂಡ.
ನವಪ್ರತಿಭೆಗಳಾದ ಅಮೃತ ಮತ್ತು ಶರಣ್ಯ ನಾಯಕಿಯರು. ಇವರೊಂದಿಗೆ ಟೆನ್ನಿಸ್‌ಕೃಷ್ಣ, ಹರೀಶ್‌ರಾಜ್, ಪವನ್‌ಕುಮಾರ್, ಕರಿಸುಬ್ಬು ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಶೇಕಡ 70ರಷ್ಟು ಚಿತ್ರೀಕರಣವು ಸಿರ್ಸಿ, ಮಲೆನಾಡು ಭಾಗಗಳಲ್ಲಿ ಮುಗಿಸಲಾಗಿದೆ. ಬಾಕಿ ಶೂಟಿಂಗ್ ಬೆಂಗಳೂರಿನಲ್ಲಿ ಸದ್ಯದಲ್ಲೆ ನಡೆಸಲು ಯೋಜನೆ ಹಾಕಲಾಗಿದೆ. ಮತ್ತಷ್ಟು ಹಿರಿಯ ಪೋಷಕ ಕಲಾವಿದರು ಸೇರಿಕೊಳ್ಳಲಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಮತ್ತು ಭರ್ಜರಿ ಚೇತನ್‌ಕುಮಾರ್ ಸಾಹಿತ್ಯದ ಗೀತೆಗಳಿಗೆ ಎಂ.ಸಂಜೀವರಾವ್ ರಾಗಗಳನ್ನು ಸಂಯೋಜಿಸಿದ್ದಾರೆ. ವೇದಾರ್ಥ್ ಜಯಕುಮಾರ್ ಛಾಯಾಗ್ರಹಣ, ಚಲುವಮೂರ್ತಿ ಸಂಕಲನ, ಅಲ್ಟಿಮೇಟ್ ಶಿವು ಸಾಹಸವಿದೆ. ಭರತ್‌ಗೌಡ ಮೂವೀಸ್ ಬ್ಯಾನರ್ ಅಡಿ ಚಿತ್ರವು ನಿರ್ಮಾಣಗೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.