ಬೆಂಗಳೂರು: ಶ್ರೀರಾಮನವಮಿ ಪ್ರಯುಕ್ತ ಅಯೋಧ್ಯೆ ರಾಮಮಂದಿರಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳನ್ನು ಜಿಯೊ ಹಾಟ್ಸ್ಟಾರ್ ನೇರಪ್ರಸಾರ ಮಾಡಲಿದ್ದು, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ರಾಮನ ಕಥೆಗಳನ್ನು ವಾಚಿಸಲಿದ್ದಾರೆ.

ಏಪ್ರಿಲ್ 6ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರಪ್ರಸಾರ ಇರಲಿದೆ ಎಂದು ಜಿಯೋ ಸ್ಟಾರ್ ತಿಳಿಸಿದೆ.

ಅಮಿತಾಬ್ ಬಚ್ಚನ್ ಅವರು ರಾಮಾಯಣದ 7 ಖಂಡಗಳಿಂದ ಆಯ್ದ ಕಥೆಗಳನ್ನು ನಿರೂಪಿಸಲಿದ್ದಾರೆ ಎಂದು ಅದು ತಿಳಿಸಿದೆ.

ಅಮಿತಾಬ್ ಬಚ್ಚನ್ ಅವರ ಕಥಾವಾಚನವಲ್ಲದೇ ಇನ್ನು ಹಲವು ವಿಶೇಷ ಸಂದರ್ಭಗಳನ್ನು ಜಿಯೊ ಹಾಟ್ಸ್ಟಾರ್ ನೇರ ಪ್ರಸಾರ ಮಾಡಲಿದೆ. ಅಯೋಧ್ಯೆ, ಭದ್ರಚಲಂ, ಪಂಚವಟಿ ಮತ್ತು ಚಿತ್ರಕೂಟದಿಂದ ಆರತಿ ಸೇವೆ, ಅಯೋಧ್ಯೆಯಲ್ಲಿ ನಡೆಯುವ ವಿಶೇಷ ಪೂಜೆ, ಗಾಯಕ ಕೈಲಾಶ್ ಖೇರ್ ಮತ್ತು ಮಾಲಿನಿ ಅವಸ್ಥಿ ಅವರ ಭಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.