ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಚಿಕಿತ್ಸೆಗೆ ನೆರವಾಗಲು ₹67 ಲಕ್ಷ ದಾನ ಮಾಡಿದ ನಟಿ ಊರ್ವಶಿ ರೌಟೇಲಾ

ಅಕ್ಷರ ಗಾತ್ರ

ಬೆಂಗಳೂರು: ಸೆಲೆಬ್ರಿಟಿಗಳ ಸಾಮಾಜಿಕ ಕಳಕಳಿ ಹಲವು ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸ್ಫೂರ್ತಿ ಒದಗಿಸುತ್ತದೆ.

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ‘ದಿ ಸ್ಮೈಲ್ ಟ್ರೈನ್‘ ಎನ್‌ಜಿಒ ಜತೆ ಕೈಜೋಡಿಸಿದ್ದು, ಜಾಗತಿಕವಾಗಿ ಸೀಳ್ದುಟಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಶ್ರಮಿಸಲಿದ್ದಾರೆ.

ನಟಿ ಊರ್ವಶಿ ಅವರು, ದಿ ಸ್ಮೈಲ್ ಟ್ರೈನ್ ಎನ್‌ಜಿಒದ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.

ಈ ಎನ್‌ಜಿಒ, ಜಾಗತಿಕವಾಗಿ ಸೀಳ್ದುಟಿಯಿಂದ ಬಳಲುತ್ತಿರುವ 1 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲು ನೆರವಾಗುತ್ತದೆ.

ಈ ಎನ್‌ಜಿಒಗೆ ಊರ್ವಶಿ ಅವರು ₹67 ಲಕ್ಷ ದಾನವಾಗಿ ನೀಡಿದ್ದು, 200 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT