ನೆಟ್ಫ್ಲಿಕ್ಸ್, ಜಿಯೋ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಫೆ.8–ಫೆ.14) ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಸಿನಿಮಾ: ಮನಶಂಕರ್ ವರಪ್ರಸಾದ್ ಗಾರು

ಭಾಷೆ: ತೆಲುಗು

ಒಟಿಟಿ: ಜೀ5

ಬಿಡುಗಡೆ ದಿನಾಂಕ: ಫೆ.11

ಟಾಲಿವುಡ್ನ ಪ್ರಮುಖ ನಟ ಚಿರಂಜೀವಿ ಅಭಿನಯದ ಕಾಮಿಡಿ ಚಲನಚಿತ್ರ ‘ಮನಶಂಕರ್ ವರಪ್ರಸಾದ್ ಗಾರು, ಫೆ.11ರಿಂದ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅನಿಲ್ ರವಿಪುಡಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿಗೆ ನಾಯಕಿಯಾಗಿ ನಯನತಾರಾ ಅಭಿನಯಿಸಿದ್ದಾರೆ. ಚಿತ್ರವು 2026ರ ಜ.12ರಂದು ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ₹290 ಕೋಟಿಗೂ ಅಧಿಕ ಗಳಿಕೆ ಮಾಡಿದ್ದ ಸಿನಿಮಾವು, ಬಿಡುಗಡೆಯಾಗಿ ಒಂದೇ ತಿಂಗಳೊಳಗೆ ಒಟಿಟಿಗೆ ಲಗ್ಗೆ ಇಟ್ಟಿದೆ. ಚಿತ್ರವು 162 ನಿಮಿಷಗಳ ಅವಧಿಯಿದೆ. ಒಟಿಟಿಯಲ್ಲಿ ಸಿನಿಮಾವನ್ನು ತೆಲುಗು, ತಮಿಳು, ಕನ್ನಡ, ಮಲಯಾಳ, ಹಿಂದಿ, ಮರಾಠಿ, ಬಂಗಾಳಿ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ.

ಸಿನಿಮಾ: ತಲೈವರ್ ತಂಬಿ ತಲೈಮೈಯಿಲ್

ಭಾಷೆ: ತಮಿಳು

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಫೆ.12

ತಮಿಳಿನ ಕಾಮಿಡಿ – ಡ್ರಾಮಾ ಸಿನಿಮಾ ‘ತಲೈವರ್ ತಂಬಿ ತಲೈಮೈಯಿಲ್’ ಫೆ.12ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ನಿತೀಶ್ ಸಹದೇವ್ ನಿರ್ದೇಶನದ ಈ ಚಿತ್ರದಲ್ಲಿ ಜೀವಾ, ಪ್ರಾರ್ಥನಾ ನಾಥನ್, ಇಳವರಸು, ತಂಬಿ ರಾಮಯ್ಯ, ಜೆನ್ಸನ್ ದಿವಾಕರ್, ಸುರ್ಜಿತ್ ಗೋಪಿನಾಥ್ ಮುಂತಾದವರು ನಟಿಸಿದ್ದಾರೆ. ಹಳ್ಳಿಯಲ್ಲಿ ನಡೆಯುವ ಮದುವೆಗೆಂದು ಬರುವ ಅಧಿಕಾರಿಯೊಬ್ಬರು, ಹಳೆಯ ಅಸಮಾಧಾನಗಳ ಬಲೆಗೆ ಸಿಲುಕಿಕೊಳ್ಳುತ್ತಾರೆ. ಆ ಪರಿಸ್ಥಿತಿಯನ್ನು ಅವರು ಹೇಗೆ ನಿಯಂತ್ರಿಸುತ್ತಾರೆ ಎನ್ನುವುದೇ ಚಿತ್ರಕತೆ. ಇದೇ ವರ್ಷದ ಜ.15ರಂದು ಬಿಡುಗಡೆಯಾಗಿದ್ದ ಚಿತ್ರವು, ಚಾಕ್ಸ್ ಆಫೀಸ್ನಲ್ಲಿ ₹40 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಚಿತ್ರವು 113 ನಿಮಿಷಗಳ ಅವಧಿಯಿದೆ.

ಸಿನಿಮಾ: ಅನಗನಗಾ ಒಕ ರಾಜು

ಭಾಷೆ: ತೆಲುಗು

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಫೆ.11

ಟಾಲಿವುಡ್ ನಟ ನವೀನ್ ಪೋಲಿಶೆಟ್ಟಿ ಅಭಿನಯದ ಕಾಮಿಡಿ – ಡ್ರಾಮಾ ಸಿನಿಮಾ ‘ಅನಗನಗಾ ಒಕ ರಾಜು’ ಫೆ.11ರಂದು ನೆಟ್ಫ್ಲಿಕ್ಸ್ ಅಲ್ಲಿ ಬಿಡುಗಡೆಯಾಗಲಿದೆ. ವಿಭಿನ್ನ ಸ್ವಭಾವದ ರಾಜು(ನವೀನ್ ಪೋಲಿಶೆಟ್ಟಿ) ಮತ್ತು ಚಾರುಲತ(ಮೀನಾಕ್ಷಿ ಚೌಧರಿ) ನಡುವಿನ ಪ್ರೀತಿ ಹಾಗೂ ಮದುವೆಯ ಸುತ್ತಾ ಸಿನಿಮಾದ ಕತೆ ಸಾಗುತ್ತದೆ. ಸಿನಿಮಾವು 2026ರ ಜ.14ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರವನ್ನು ಮಾರಿ ನಿರ್ದೇಶಿಸಿದ್ದಾರೆ. 147 ನಿಮಿಷ ಅವಧಿಯ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.

ಸಿನಿಮಾ: ಬೇಬಿ ಗರ್ಲ್

ಭಾಷೆ: ಮಲಯಾಳ

ಒಟಿಟಿ: ಸೋನಿ ಲೈವ್

ಬಿಡುಗಡೆ ದಿನಾಂಕ: ಫೆ.12

ಮಾಲಿವುಡ್ನ ಥ್ರಿಲ್ಲರ್ ಸಿನಿಮಾ ‘ಬೇಬಿ ಗರ್ಲ್’, ಫೆ.12ರಿಂದ ಸೋನಿ ಲೈವ್ ಅಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದು ಕಾಣೆಯಾಗುತ್ತದೆ. ಅಲ್ಲಿ ಅಟೆಂಡರ್ ಕೆಲಸ ಮಾಡುತ್ತಿದ್ದ ನಾಯಕ, ಆ ಪ್ರಕರಣದ ಬೆನ್ನು ಹತ್ತುತ್ತಾನೆ. ಮುಂದೇನಾಗುತ್ತದೇ ಎನ್ನುವುದೇ ‘ಬೇಬಿ ಗರ್ಲ್’ ಸಿನಿಮಾದ ಕತೆಯಾಗಿದೆ. ಈ ಚಿತ್ರವನ್ನು ಅರುಣ್ ವರ್ಮಾ ಅವರು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನಿವಿನ್ ಪಾಲಿ, ಲಿಜೋಮೋಲ್ ಜೋಸ್, ಸಂಗೀತ್ ಪ್ರತಾಪ್, ಜಾಫರ್ ಇಡುಕ್ಕಿ ಮುಂತಾದವರು ನಟಿಸಿದ್ದಾರೆ. ಚಿತ್ರವು ಜ.23ರಂದು ಬಿಡುಗಡೆಯಾಗಿತ್ತು. 152 ನಿಮಿಷಗಳ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.