ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

14ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಭಜರಂಗಿ ಭಾಯಿಜಾನ್ ತಾರೆ ಹರ್ಷಾಲಿ ಮಲ್ಹೋತ್ರ

ಅಕ್ಷರ ಗಾತ್ರ

ಬೆಂಗಳೂರು: ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ಭಜರಂಗಿ ಭಾಯಿಜಾನ್‌ನಲ್ಲಿ ‘ಮುನ್ನಿ‘ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದ ಹರ್ಷಾಲಿ ಮಲ್ಹೋತ್ರಾ, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಹರ್ಷಾಲಿ ಅವರು 14ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

'ಬೈ ಬೈ 13, ವೆಲ್‌ಕಮ್ 14' ಎಂದು ಅಡಿಬರಹ ನೀಡಿರುವ ವಿಡಿಯೊ ಒಂದನ್ನು ಹರ್ಷಾಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಹರ್ಷಾಲಿ ಅವರು ಭಜರಂಗಿ ಭಾಯಿಜಾನ್‌ನ ‘ಮುನ್ನಿ‘ ಪಾತ್ರದಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಜನರು ಕೂಡ ಆಕೆಯನ್ನು ಮುನ್ನಿ ಎಂದೇ ಕರೆಯುವ ಮೂಲಕ ಪ್ರೀತಿ ತೋರಿಸುತ್ತಾರೆ.

ಸಲ್ಮಾನ್ ಖಾನ್ ಅಭಿನಯದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚಿನ ಗಳಿಕೆ ದಾಖಲಿಸಿ ಸುದ್ದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT