ಕನ್ನಡದಲ್ಲಿ ಇಲ್ಲಿಯವರೆಗೆ ಎಷ್ಟು ವೆಬ್ ಸರಣಿಗಳು ಬಂದಿವೆ? ಹೀಗೊಂದು ಪ್ರಶ್ನೆ ಎದುರಿಗಿಟ್ಟರೆ ಲೆಕ್ಕಕ್ಕೆ ಸಿಗುವುದು ಬೆರಳೆಣಿಕೆಯಷ್ಟೇ ಹೆಸರುಗಳು. ‘ಏಕಂ’ ಎಂಬ ವೆಬ್ ಸರಣಿಯನ್ನು ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದರು. ಅದನ್ನು ಒಟಿಟಿ ವೇದಿಕೆಗಳು ಖರೀದಿಸದೇ ಇದ್ದಾಗ ‘ಎಲ್ಲೆಡೆ ನಿರಾಸೆ. ಅದೇ ನೆಪ. ಅದೇ ಸಬೂಬು!...’ ಎಂದು ಸೂಕ್ಷ್ಮವಾಗಿ ತಮ್ಮ ಆಕ್ರೋಶ ಹೊರಹಾಕಿದ್ದರು ರಕ್ಷಿತ್. ಪರಿಸ್ಥಿತಿ ಹೀಗಿರುವಾಗಲೂ ಹೊಸದೊಂದು ವೆಬ್ ಸರಣಿಯನ್ನು ನಟ, ಕಿರುತೆರೆ ನಿರ್ದೇಶಕ ರಮೇಶ್ ಇಂದಿರಾ ನಿರ್ದೇಶಿಸಿ, ಜೀ 5 ಮೂಲಕ ಪ್ರೇಕ್ಷಕರ ಎದುರಿಗೆ ಇಡುತ್ತಿದ್ದಾರೆ. ವೆಬ್ ಸರಣಿಯನ್ನು ಒಂದು ಪರ್ಯಾಯ ಉದ್ಯಮವನ್ನಾಗಿ ರಮೇಶ್ ಇಂದಿರಾ ನೋಡುತ್ತಿದ್ದಾರೆ.

ಈ ಕುರಿತು ಮಾತಿಗಿಳಿದ ಅವರು, ‘ವೆಬ್ ಸರಣಿಯನ್ನು ನಿರ್ಮಾಣ ಮಾಡಲು ನಮ್ಮವರಲ್ಲಿ ಹೆಚ್ಚಿನವರು ಪ್ರಯತ್ನ ಮಾಡಲಿಲ್ಲ. ಜೊತೆಗೆ ನಮ್ಮ ಬಗ್ಗೆ ನಮ್ಮವರಿಗೇ ಸ್ವಲ್ಪ ಅನುಮಾನ ಜಾಸ್ತಿ. ಕನ್ನಡ ವೆಬ್ ಸರಣಿ ಕ್ಷೇತ್ರದಲ್ಲಿ ಹೆಜ್ಜೆ ಇಡಲೇಬೇಕು ಎನ್ನುವ ಕಾರಣಕ್ಕೆ ಜೀ 5ನವರು ಒಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅವರೇ ನೇರವಾಗಿ ಶೃತಿ ನಾಯ್ಡು ಅವರನ್ನು ಸಂಪರ್ಕಿಸಿ ವೆಬ್ ಸರಣಿ ನಿರ್ಮಾಣದ ಯೋಜನೆ ಇಟ್ಟಿದ್ದರು. ಜನರು ವೆಬ್ ಸರಣಿಗೆ ಆತುಕೊಳ್ಳುವುದಕ್ಕೆ ಥ್ರಿಲ್ಲರ್ ಅಂಶ ಮುಖ್ಯ. ಈ ಜಾನರ್ನಲ್ಲೇ ಕಥೆಯಿರಬೇಕು ಎಂದು ಕೇಳಿದ್ದರು. ಇದರ ಆಧಾರದ ಮೇಲೆ ಕಥೆ ನಿರೂಪಿಸಿದ್ದೆವು. ಇದೊಂದು ಮಿನಿ ವೆಬ್ ಸರಣಿ. ಕಥೆ ಏಳು ಎಪಿಸೋಡ್ ಹೊಂದಿದೆ. ಪ್ರೇಕ್ಷಕರು ಇದನ್ನು ನೋಡಿ ಮೆಚ್ಚಿಕೊಂಡರೆ, ಎರಡನೇ ಆವೃತ್ತಿಯಾಗಿ ತರುವುದಕ್ಕೂ ಕಥೆಯಲ್ಲಿ ಅವಕಾಶವಿದೆ’ ಎಂದರು.

ಬರವಣಿಗೆ ಭಿನ್ನ

‘ಧಾರಾವಾಹಿ ಬರವಣಿಗೆಗೂ ವೆಬ್ ಸರಣಿ ಕಥೆ ಬರೆಯುವುದಕ್ಕೆ ಬಹಳ ವ್ಯತ್ಯಾಸವಿದೆ. ಇಲ್ಲಿ ಪ್ರೇಕ್ಷಕರು ಮುಂದಿನ ಎಪಿಸೋಡ್ ನೋಡುವಂತೆ ಕ್ಲೈಮ್ಯಾಕ್ಸ್ ಸೃಷ್ಟಿಸುವುದು ಬಹಳ ಮುಖ್ಯ. ಈ ಕಥೆಯಲ್ಲಿ ನನಗೆ ಈ ಅಂಶಗಳು ತಾನಾಗೇ ಬಂದು ಕುಳಿತುಕೊಂಡವು. ಸಾಮಾನ್ಯವಾಗಿ ಕ್ಲೈಮ್ಯಾಕ್ಸ್ ಬರೆದು ಹಿಂದಕ್ಕೆ ಕಥೆ ಬರೆಯುತ್ತಾರೆ. ಆದರೆ ನನಗೆ ಕಥೆ ಬರೆಯುತ್ತಾ ಎಪಿಸೋಡ್ನ ಕ್ಲೈಮಾಕ್ಸ್ಗಳು ಸಿಕ್ಕವು. ವೆಬ್ ಸರಣಿ ಬರವಣಿಗೆಯಲ್ಲಿ ತಂತ್ರಗಾರಿಗೆ ಅಗತ್ಯ’ ಎನ್ನುತ್ತಾರೆ ರಮೇಶ್ ಇಂದಿರಾ.

ಪರ್ಯಾಯ ಉದ್ಯಮ ಸೃಷ್ಟಿ

‘ಕನ್ನಡದಲ್ಲಿ ವೆಬ್ ಸರಣಿಗಳು ಯಶಸ್ಸು ಕಂಡರೆ ಅವು ಪರ್ಯಾಯ ಉದ್ಯಮವನ್ನು ಸೃಷ್ಟಿಸುವ ಸಾಧ್ಯತೆ ಇದೆ’ ಎನ್ನುವ ರಮೇಶ್ ಇಂದಿರಾ, ‘ಉಳಿದ ಭಾಷೆಗಳಲ್ಲಿ ನಿರಂತರವಾಗಿ ವೆಬ್ ಸರಣಿಗಳ ನಿರ್ಮಾಣ ನಡೆಯುತ್ತಿದೆ. ಆದರೆ ಮೊದಲಿಗೆ ಹೋಲಿಸಿದರೆ ಈ ಪ್ರಮಾಣ ಇದೀಗ ಇಳಿಕೆಯಾಗಿದೆ. ಆರಂಭದಲ್ಲಿ ಪ್ರತಿ ವಾರ ಒಂದು ಹೊಸ ವೆಬ್ ಸರಣಿ ಬಿಡುಗಡೆಯಾಗುತ್ತಿದ್ದತ್ತು. ಇದೀಗ ಹಿಟ್ ಆದ ವೆಬ್ ಸರಣಿಗಳ ಆವೃತ್ತಿಗಳು ಬರುತ್ತಿವೆ. ಏಕೆಂದರೆ ಇವುಗಳಿಗೆ ಈಗಾಗಲೇ ಆತುಕೊಂಡಿರುವ ಒಂದು ಪ್ರೇಕ್ಷಕ ವರ್ಗವಿದೆ. ಬೇರೆ ವಾಹಿನಿಗಳೂ ಕನ್ನಡದ ವೆಬ್ ಸರಣಿ ಮಾಡಲಿವೆ ಎನ್ನುವ ಸುದ್ದಿ ಇದೆ. ಕನ್ನಡದಲ್ಲಿ ವೆಬ್ ಸರಣಿಗಳು ನಿರಂತರವಾಗಿ ಬರಬೇಕಾದ ಅವಶ್ಯಕತೆ ಬಹಳಷ್ಟಿದೆ. ಶೃತಿ ಅವರು ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಟ್ಟಿದ್ದಾರೆ. ಈ ವೆಬ್ ಸರಣಿಗಳನ್ನು ನೋಡಿದರಷ್ಟೇ ಒಟಿಟಿ ವೇದಿಕೆಗಳು ಕನ್ನಡದಲ್ಲಿ ಹೊಸ ಪ್ರಾಜೆಕ್ಟ್ಗಳಿಗೆ ಕೈಹಾಕುತ್ತವೆ. ವ್ಯಾಪಾರ ಆಗದಿದ್ದರೆ ಅವರೂ ಬಿಟ್ಟುಬಿಡುತ್ತಾರೆ. ನೋಡಲಿಕ್ಕೆ ಜನ ಇದ್ದಾರೆ ಎಂದು ಅವರಿಗೆ ಅನಿಸಿದರೆ ಹೊಸ ಹೊಸ ವಿಷಯದ ವೆಬ್ ಸರಣಿಗಳು ಬರಬಹುದು’ ಎಂದರು.

‘ವೆಬ್ ಸರಣಿಗಳ ನಿರ್ಮಾಣ ಮಾಡುವುದು ಎಂದರೆ ಒಂದು ಮಧ್ಯಮ ಬಜೆಟ್ನ ಸಿನಿಮಾ ಮಾಡಿದಂತೆ. ವೆಬ್ ಸರಣಿಗಳಲ್ಲಿ ಗುಣಮಟ್ಟ ಮುಖ್ಯ. ಸಿನಿಮಾ ಕ್ಯಾಮೆರಾ ಬಳಸುತ್ತೇವೆ, ವಿಎಫ್ಎಕ್ಸ್, ಡಬ್ಬಿಂಗ್ ಕೂಡಾ ಇರುತ್ತದೆ. ಧಾರಾವಾಹಿ ನಿರ್ಮಾಣಕ್ಕಿಂತ ಮೂರ್ನಾಲ್ಕು ಪಟ್ಟು ಜಾಸ್ತಿ ಖರ್ಚು ಇಲ್ಲಿ ಇರುತ್ತದೆ’ ಎಂದು ಮಾತಿಗೆ ವಿರಾಮವಿತ್ತರು.

ಕನ್ನಡದ ವೆಬ್ ಸರಣಿಯ ಜನಪ್ರಿಯತೆ ಹಾಗೂ ಬಜೆಟ್ ಹೆಚ್ಚಾದರೆ ಖಂಡಿತವಾಗಿಯೂ ಚಿತ್ರರಂಗದ ಪ್ರಮುಖ ಕಲಾವಿದರು ಇದರತ್ತ ಮುಖ ಮಾಡುತ್ತಾರೆ. ಮನ್ನಣೆ ದೊರಕುತ್ತದೆ ಎಂದರೆ ಯಾವ ಮಾರುಕಟ್ಟೆಯಾದರೂ ಬರುತ್ತಾರೆ. ವೆಬ್ ಸರಣಿಗೆ ಕಥೆಯ ಆಯ್ಕೆ ಗುಣಮಟ್ಟವೂ ಮುಖ್ಯವಾಗುತ್ತದೆ.
–ರಮೇಶ್ ಇಂದಿರಾ ನಟ–ನಿರ್ದೇಶಕ

ಕೈಯಲ್ಲಿ ನಾಲ್ಕೈದು ಸಿನಿಮಾ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ರಮೇಶ್ ಇಂದಿರಾ ಅವರ ಸಿನಿಬ್ಯಾಂಕ್ ಹಿಗ್ಗುತ್ತಿದೆ. ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಡಾರ್ಲಿಂಗ್ ಕೃಷ್ಣ ನಟನೆಯ ಶಶಾಂಕ್ ನಿರ್ದೇಶನದ ‘ಬ್ರ್ಯಾಟ್’ ಗಣೇಶ್ ನಟನೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇನ್ನೆರಡು ಸಿನಿಮಾಗಳು ಮಾತುಕತೆ ಹಂತದಲ್ಲಿವೆ.

‘ಅಯ್ಯನ ಮನೆ’ ಕಥೆಯೇನು?

ಏ.25ರಿಂದ ಜೀ 5ನಲ್ಲಿ ಈ ವೆಬ್ ಸರಣಿ ಸ್ಟ್ರೀಮ್ ಆಗಲಿದೆ. ರಮೇಶ್ ಇಂದಿರಾ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಶೃತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಚಿಕ್ಕಮಗಳೂರಿನ ‘ಅಯ್ಯನ ಮನೆ’ ಕುಟುಂಬದಲ್ಲಿ ನಡೆಯುವ ಘಟನೆಗಳ ಸುತ್ತ ಸರಣಿಯ ಕಥೆ ಇದೆ. ರಹಸ್ಯ ನಂಬಿಕೆ ಆಚರಣೆ ಹಾಗೂ ಕೌಟುಂಬಿಕ ಕಥೆಯುಳ್ಳ ‘ಅಯ್ಯನ ಮನೆ’ ಥ್ರಿಲ್ಲರ್ ಜಾನರ್ನಲ್ಲಿದೆ. ಜಾಜಿ ಎಂಬ ಪಾತ್ರದಲ್ಲಿ ಖುಷಿ ರವಿ ಮುಖ್ಯಭೂಮಿಕೆಯಲ್ಲಿದ್ದಾರೆ. ಅಕ್ಷಯ್ ನಾಯಕ್ ಮಾನಸಿ ಸುಧೀರ್ ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.