ಮಂಗಳಪುರಂ: ಲಯದಲ್ಲಿರುವ ಕರುಣ್ ನಾಯರ್ ಮತ್ತೊಂದು ಅಮೋಘ ಶತಕ ಗಳಿಸಿದರು. ಸ್ಮರಣ್ ಆರ್. ಮತ್ತು ಕೆ.ಎಲ್.ಶ್ರೀಜಿತ್ ಅವರೂ ಅರ್ಧ ಶತಕಗಳನ್ನು ಬಾರಿಸುವುದರೊಂದಿಗೆ ಕರ್ನಾಟಕ ತಂಡವು ಶನಿವಾರ ರಣಜಿ ಟ್ರೋಫಿ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕೇರಳ ವಿರುದ್ಧ ಮೊದಲ ದಿನದ ಗೌರವ ಪಡೆಯಿತು.

ಮಂಗಲಪುರಂನ ಕೆಸಿಎ ಮೈದಾನದಲ್ಲಿ ಕರ್ನಾಟಕ ಒಂದು ಹಂತದಲ್ಲಿ 7.3 ಓವರುಗಳಲ್ಲಿ 13 ರನ್ಗಳಾಗುವಷ್ಟರಲ್ಲಿ ಆರಂಭ ಆಟಗಾರರನ್ನು ಕಳೆದುಕೊಂಡಿತ್ತು. ಈ ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಕರುಣ್ ಅಜೇಯ 142 ರನ್ ಬಾರಿಸಿದರು. ಯುವ ತಾರೆ ಸ್ಮರಣ್ (ಅಜೇಯ 88, 143ಎ, 4x8, 6x1) ಅವರಿಗೆ ಬೆಂಬಲ ನೀಡಿದ್ದು ದಿನದಾಟ ಮುಗಿದಾಗ ಕರ್ನಾಟಕ 90 ಓವರುಗಳಲ್ಲಿ 3 ವಿಕೆಟ್ಗೆ 319 ರನ್ ಗಳಿಸಿದೆ. 143 ಎಸೆತಗಳನ್ನು ಎದುರಿಸಿರುವ ಕರುಣ್ ಎರಡು ಸಿಕ್ಸರ್ಗಳ ಜೊತೆ 14 ಬೌಂಡರಿ ಬಾರಿಸಿದ್ದಾರೆ.

ಮೊದಲೆರಡು ಪಂದ್ಯಗಳಲ್ಲಿ ಪರದಾಡಿದ್ದ ಶ್ರೀಜಿತ್ ಇಲ್ಲಿ 10 ಬೌಂಡರಿಗಳಿದ್ದ 65 ರನ್ ಹೊಡೆದರು. 29 ವರ್ಷದ ವಿಕೆಟ್ ಕೀಪರ್–ಬ್ಯಾಟರ್ ಮೂರನೇ ವಿಕೆಟ್ಗೆ ಕರುಣ್ ಜೊತೆ 123 ರನ್ ಜೊತೆಯಾಟದಲ್ಲಿ ಭಾಗಿಯಾದರು. ಇದರಿಂದಾಗಿ ಕರ್ನಾಟಕ ಆರಂಭದ ಕುಸಿತದಿಂದ ಸುರಕ್ಷಿತ ಸ್ಥಿತಿಗೆ ತಲುಪಿತು.

ಮುರಿಯದ ಮೂರನೇ ವಿಕೆಟ್ಗೆ ಕರುಣ್ ಮತ್ತು ಸ್ಮರಣ್ 183 ರನ್ (292 ಎಸೆತ) ಸೇರಿಸಿ ಕೇರಳದ ಬೌಲರ್ಗಳನ್ನು ಹತಾಶಗೊಳಿಸಿದರು.

ಆದರೆ ಕೇರಳ ಬೆಳಿಗ್ಗೆ ಉತ್ತಮ ಆರಂಭ ಮಾಡಿತು. ಐದನೇ ಓವರಿನಲ್ಲಿ ನಾಯಕ ಮಯಂಕ್ ಅಗರವಾಲ್ (5), ಎಂ.ಡಿ.ನಿಧೀಶ್ (41ಕ್ಕೆ1) ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ಅಜರುದ್ದೀನ್ಗೆ ಕ್ಯಾಚಿತ್ತರು. ವಿಫಲರಾಗಿದ್ದ ನಿಖಿನ್ ಜೋಸ್ ಬದಲು ಅವಕಾಶ ಪಡೆದಿದ್ದ ಅನೀಶ್ ಕೆ.ವಿ. (8) ಅವರು ಮೂರು ಓವರುಗಳ ತರುವಾಯ ನೆಡುಮಾನ್ಕುಳಿ ಬಾಸಿಲ್ ಅವರಿಗೆ ವಿಕೆಟ್ ನೀಡಿದರು.

ಆದರೆ ಈ ವೇಳೆ ಜೊತೆಗೂಡಿದ ಕರುಣ್ ಮತ್ತು ಶ್ರೀಜಿತ್ ಮೊತ್ತವನ್ನು ಬೆಳೆಸಿದರು. ಕರುಣ್ ಒಂದೆಡೆ ಇನಿಂಗ್ಸ್ಗೆ ಲಂಗರುಹಾಕಿದರೆ, ಶ್ರೀಜಿತ್ ಸ್ವಲ್ಪ ಆಕ್ರಮಣಕಾರಿಯಾಗಿ ಆಡಿದರು. ಕೊನೆಗೂ ಈ ಶತಕದ ಜೊತೆಯಾಟವನ್ನು ಆಫ್ ಸ್ಪಿನ್ನರ್ ಬಾಬಾ ಅಪರಾಜಿತ್ ಮುರಿದರು. ಆದರೆ ಈ ಯಶಸ್ಸು ಕೇರಳಕ್ಕೆ ದಿನದ ಕೊನೆಯದಾಯಿತು.

ಕರ್ನಾಟಕ ಈ ಪಂದ್ಯದಲ್ಲಿ ಇನ್ನೆರಡು ಬದಲಾವಣೆ ಮಾಡಿತು. ಸ್ಪಿನ್ನರ್ಗಳಾದ ಶಿಖರ್ ಶೆಟ್ಟಿ ಮತ್ತು ಮೊಹ್ಸಿನ್ ಖಾನ್ ಅವರನ್ನು ಸೇರ್ಪಡೆಗೊಳಿಸಿತು.

ಸ್ಕೋರುಗಳು: ಮೊದಲ ಇನಿಂಗ್ಸ್: ಕರ್ನಾಟಕ: 90 ಓವರುಗಳಲ್ಲಿ 3 ವಿಕೆಟ್ಗೆ 319 (ಕೆ.ಎಲ್.ಶ್ರೀಜಿತ್ 65, ಕರುಣ್ ನಾಯರ್ ಔಟಾಗದೇ 142, ಆರ್.ಸ್ಮರಣ್ ಔಟಾಗದೇ 88) ವಿರುದ್ಧ ಕೇರಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.