ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕಪ್ ಸೆಲ್ಫಿ ಫೋಟೊ: ಪತ್ನಿಯ ಕಾಲೆಳೆದ ಶಾಹಿದ್ ಕಪೂರ್

ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ದಂಪತಿ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್, ಸಾಮಾಜಿಕ ತಾಣಗಳಲ್ಲೂ ಸದಾ ಸಕ್ರಿಯರಾಗಿರುತ್ತಾರೆ.

ಪರಸ್ಪರ ಕಾಲೆಳೆಯುವ ಪೋಸ್ಟ್ ಮತ್ತು ಕಾಮೆಂಟ್ ಮಾಡುವುದು ಎಂದರೆ ಅವರಿಗೆ ಅಚ್ಚುಮೆಚ್ಚು!

ಮೀರಾ ರಜಪೂತ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ‘ನೋ ಫಿಲ್ಟರ್ ಮೇಕಪ್‘ ಫೋಟೊ ಒಂದಕ್ಕೆ ಶಾಹಿದ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಈ ಫೋಟೊಗೆ ಯಾವುದೇ ಫಿಲ್ಟರ್ ಬಳಸಿಲ್ಲ. ಮೇಕಪ್ ನಾನೇ ಮಾಡಿಕೊಂಡೆ, ಹೊಸ ಮೇಕಪ್ ಉತ್ಪನ್ನ ಬಳಸುತ್ತಿದ್ದೇನೆ ಮತ್ತು ಇದು ಚೆನ್ನಾಗಿದೆ ಎಂದು ಮೀರಾ ಫೋಟೊ ಪೋಸ್ಟ್ ಮಾಡಿದ್ದಾರೆ.

ಅದನ್ನು ಗಮನಿಸಿದ ಶಾಹಿದ್, ಆಕೆ ಹೊಸ ಮೇಕಪ್ ಉತ್ಪನ್ನ ಬಳಸಿಕೊಂಡು ಎಷ್ಟು ಖುಷಿಯಾಗಿದ್ದಾಳೆ ಎಂದರೆ, ಸೆಲ್ಫಿ ತೆಗೆದುಕೊಳ್ಳಲು ಬಾತ್‌ರೂಮ್‌ನಿಂದ ಹೊರಗೆ ಬರುವಷ್ಟು ಕಾಯುವ ತಾಳ್ಮೆ ಇಲ್ಲ ಎಂದು ತಮಾಷೆಯಿಂದ ಕಾಮೆಂಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT