ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಹಾನಾ ಖಾನ್ ಹುಟ್ಟುಹಬ್ಬ: ಫೋಟೊ ಪೋಸ್ಟ್ ಮಾಡಿ ಶುಭಕೋರಿದ ಗೌರಿ ಖಾನ್

ಅಕ್ಷರ ಗಾತ್ರ

ಬೆಂಗಳೂರು: ನಟನಾ ಲೋಕಕ್ಕೆ ಈಗಷ್ಟೇ ಕಾಲಿಡುತ್ತಿರುವ ಸುಹಾನಾ ಖಾನ್ ಅವರಿಗೆ ಭಾನುವಾರ ಹುಟ್ಟುಹಬ್ಬದ ಸಂಭ್ರಮ.

22ನೇ ವರ್ಷಕ್ಕೆ ಕಾಲಿರಿಸಿದ ಮಗಳಿಗೆ ಗೌರಿ ಖಾನ್, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಪೋಸ್ಟ್ ಮಾಡುವ ಮೂಲಕ ಶುಭಕೋರಿದ್ದಾರೆ.

ಗೌರಿ ಖಾನ್ ಅವರ ಬರ್ತ್‌ಡೇ ಪೋಸ್ಟ್‌ಗೆ ಬಾಲಿವುಡ್ ಸೆಲೆಬ್ರಿಟಿಗಳು, ಚಿತ್ರರಂಗದ ಪ್ರಮುಖರು ಮತ್ತು ಗೌರಿ ಅವರ ಸ್ನೇಹಿತರು ಕಾಮೆಂಟ್ ಮಾಡಿ, ಸುಹಾನಾಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಸುಹಾನಾ ಖಾನ್ ಅವರು ನೆಟ್‌ಫ್ಲಿಕ್ಸ್ ವೆಬ್ ಸಿರೀಸ್ ಆರ್ಚೀಸ್‌ ಮೂಲಕ ಸಿನಿ ರಂಗ ಪ್ರವೇಶಿಸುತ್ತಿದ್ದಾರೆ.

ಜೋಯಾ ಅಖ್ತರ್ ನಿರ್ದೇಶನದ ಹೊಸ ವೆಬ್ ಸಿರೀಸ್‌ನಲ್ಲಿ ಅಗಸ್ತ್ಯ ನಂದಾ, ಖುಷಿ ಕಪೂರ್ ನಟಿಸಿದ್ದಾರೆ.

ದಿ ಆರ್ಚೀಸ್ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT