ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಕ್‌ಟಾಕ್‌ ಖ್ಯಾತಿಯ ಯುವತಿ ಮೇಘಾ ಠಾಕೂರ್ ನಿಧನ

Last Updated 3 ಡಿಸೆಂಬರ್ 2022, 12:24 IST
ಅಕ್ಷರ ಗಾತ್ರ

ನವದೆಹಲಿ: ಕೆನಡಾದಲ್ಲಿನೆಲೆಸಿರುವ ಭಾರತೀಯ ಮೂಲದ ಟಿಕ್‌ಟಾಕ್‌ ಸ್ಟಾರ್‌ ಮೇಘಾ ಠಾಕೂರ್ ಮೃತಪಟ್ಟಿದ್ದಾರೆ. ಅವರಿಗೆ 21 ವರ್ಷ ವಯಸ್ಸಾಗಿತ್ತು.

ಮೇಘಾ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಅವರ ಪೋಷಕರು ನವೆಂಬರ್‌ 24ರ ಮುಂಜಾನೆ ಮೇಘಾ ಮೃತಪಟ್ಟರು ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ಟಿಕ್‌ಟಾಕ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದ ಅವರು ಡ್ಯಾನ್ಸ್‌ಗಳ ಮೂಲಕ ಖ್ಯಾತಿ ಪಡೆದಿದ್ದರು

ಆತ್ಮವಿಶ್ವಾಸ ಹೊಂದಿದ್ದಮೇಘಾ ಜೀವನ ಪ್ರೀತಿ ಹೊಂದಿದ್ದರು. ಈ ಸಮಯದಲ್ಲಿನಿಮ್ಮ ಆಶೀರ್ವಾದವನ್ನು ವಿನಂತಿಸುತ್ತೇವೆ. ನಮ್ಮ ಪ್ರಾರ್ಥನೆಗಳು ಹಾಗೂ ನಿಮ್ಮಆಶೀರ್ವಾದಮುಂದಿನ ಪ್ರಯಾಣದಲ್ಲಿ ಅವಳೊಂದಿಗೆ ಇರುತ್ತವೆ. ಎಂದು ಮೇಘಾನ ಫೋಷರು ಭಾವನಾತ್ಮಕ ಫೋಸ್ಟ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT