‘ದಿಯಾ’ ಸಿನಿಮಾದಿಂದ ಬೆಳ್ಳಿತೆರೆಯಲ್ಲಿ ಮಿಂಚಿದ ದೀಕ್ಷಿತ್ ಶೆಟ್ಟಿ ಬಳಿಕ ‘ದಸರಾ’ ಸಿನಿಮಾ ಮೂಲಕ ಟಾಲಿವುಡ್ಗೂ ಕಾಲಿಟ್ಟವರು. ಸದ್ಯ ಸಾಲು ಸಾಲು ಪ್ರಾಜೆಕ್ಟ್ಗಳನ್ನು ಕೈಯಲ್ಲಿಟ್ಟುಕೊಂಡಿರುವ ದೀಕ್ಷಿತ್, ಸಿನಿಮಾ ಜೊತೆಗೆ ವೆಬ್ ಸರಣಿಗೂ ಹೆಜ್ಜೆ ಇಟ್ಟಿದ್ದಾರೆ.

ಅವರು ನಟಿಸಿರುವ ಮೊದಲ ವೆಬ್ ಸರಣಿ ‘ಟಚ್ ಮಿ ನಾಟ್’ ಜಿಯೊ ಹಾಟ್ಸ್ಟಾರ್ನಲ್ಲಿ ಬಿಡುಗಡೆಗೊಂಡಿದೆ. ಈ ಸರಣಿಯು ತೆಲುಗಿನಲ್ಲಿ ಚಿತ್ರೀಕರಣಗೊಂಡಿದ್ದು, ಕನ್ನಡ, ಹಿಂದಿ, ತಮಿಳು ಸೇರಿದಂತೆ ಎಂಟು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಥ್ರಿಲ್ಲರ್ ಮಿಸ್ಟರಿ ಜಾನರ್ನಲ್ಲಿ ಈ ಸರಣಿಯಿದೆ. ಅಸಾಧಾರಣ ಶಕ್ತಿ ಹೊಂದಿದ ಯುವಕನೊಬ್ಬ ತಂಡವೊಂದನ್ನು ಕಟ್ಟಿಕೊಂಡು ಅತ್ಯಂತ ಕಠಿಣ ಪ್ರಕರಣಗಳನ್ನು ಬಗೆಹರಿಸುವ ಕಥೆ ಇದರಲ್ಲಿದೆ. ಮುಖ್ಯಭೂಮಿಕೆಯಲ್ಲಿ ದೀಕ್ಷಿತ್ ನಟಿಸಿದ್ದಾರೆ. ಮೊದಲ ಸೀಸನ್ನಲ್ಲಿ ಒಟ್ಟು ಆರು ಕಂತುಗಳು ಇವೆ.

ದೀಕ್ಷಿತ್ ಸದ್ಯ ರಶ್ಮಿಕಾ ಮಂದಣ್ಣ ಅವರ ಜೊತೆಗಿನ ತೆಲುಗು ಸಿನಿಮಾ ‘ದಿ ಗರ್ಲ್ಫ್ರೆಂಡ್’ ಹಾಗೂ ಕನ್ನಡದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲಿ ‘ಕೆಜೆಕ್ಯು’, ಮಲಯಾಳದಲ್ಲಿ ‘ಒಪ್ಪೀಸ್’ ಎಂಬ ಸಿನಿಮಾವನ್ನೂ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.