ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್ ಸರಣಿ | ‘ಸ್ಕ್ಯಾಮ್ 2003‘: ತೆರೆಯ ಮೇಲೆ ತೆಲಗಿಯ ನಕಲಿ ಛಾಪಾ ಕಾಗದ ಹಗರಣ

Published 5 ಆಗಸ್ಟ್ 2023, 11:38 IST
Last Updated 5 ಆಗಸ್ಟ್ 2023, 11:38 IST
ಅಕ್ಷರ ಗಾತ್ರ

ಭಾರತದ ಬಹುದೊಡ್ಡ ಹಣಕಾಸು ಹಗರಣಗಳಲ್ಲಿ ಒಂದಾದ ಕರೀಂ ಲಾಲ್‌ ತೆಲಗಿಯ ನಕಲಿ ಛಾಪಾ ಕಾಗದ ಹಗರಣ ಇದೀಗ ವೆಬ್ ಸರಣಿ ಆಗಿದ್ದು ಬಿಡುಗಡೆಗೆ ಸಿದ್ದವಾಗಿದೆ.

ಕರೀಂ ತೆಲಗಿಯ ಹಗರಣವನ್ನು ‘ಸ್ಕ್ಯಾಮ್ 2003’ ಹೆಸರಿನಲ್ಲಿ ವೆಬ್‌ ಸರಣಿ ಮಾಡಲಾಗಿದೆ. ಇದರ ಟ್ರೈಲರ್‌ ಶನಿವಾರ ಬಿಡುಗಡೆಯಾಗಿದೆ.

ಈ ಹಿಂದೆ ಹರ್ಷದ್ ಮೆಹ್ತಾ ಹಗರಣವನ್ನು ‘ಸ್ಕ್ಯಾಮ್ 1992 ಹೆಸರಿನಲ್ಲಿ ವೆಬ್ ಸರಣಿ ಮಾಡಿದ್ದ ತಂಡವೇ ಈ ವೆಬ್‌ ಸರಣಿಯನ್ನು ನಿರ್ಮಾಣ ಮಾಡಿದೆ. ಹನ್ಸಲ್ ಮೆಹ್ತಾ  ‘ಸ್ಕ್ಯಾಮ್ 2003’ ವೆಬ್‌ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. 

ಕರೀಂ ಲಾಲ್‌ ತೆಲಗಿಯ ಸಂಪೂರ್ಣ ಕಥೆಯನ್ನು ಚಿತ್ರಿಸಲಾಗಿದೆ. ತೆಲಗಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದು, ನಂತರ ತೆಲಗಿ ಬಂಧನವಾದ ಬಳಿಕವೂ ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಾ ಹಗರಣ ಮುಂದುವರೆಸಿದ್ದನ್ನು ಚಿತ್ರಿಸಲಾಗಿದೆ. 

ವಿಶೇಷವೆಂದರೆ ತೆಲಗಿ ಜೊತೆ ಕೈಜೋಡಿಸಿದ್ದ ರಾಜಕಾರಣಿಗಳು, ಸಚಿವರು, ಶಾಸಕರು, ಪೊಲೀಸ್‌ ಅಧಿಕಾರಿಗಳು ಹಾಗೂ ಪತ್ರಕರ್ತರ ಪಾತ್ರಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.  

‘ಸ್ಕ್ಯಾಮ್ 2003’ ವೆಬ್‌ ಸರಣಿ ಸೆಪ್ಟೆಂಬರ್‌ 2ರಂದು ಸೋನಿ ಲೈವ್‌ನಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT