ಚಿತ್ರದ ಶೀರ್ಷಿಕೆಯಾಗಿರುವ ‘ಘಾರ್ಗಾ’ ಒಂದು ಕಾಲ್ಪನಿಕ ಊರು. ಅಲ್ಲಿ ಬಳಸುವ ಭಾಷೆಯಿಂದಾಗಿ, ಸಂಸ್ಕೃತಿಯಿಂದಾಗಿ ಕುಂದಾಪುರ ಕಡೆಯ ಊರೆಂಬ ಭಾವನೆ ಮೂಡುತ್ತದೆ. ಆದರೆ ಎಲ್ಲಿಯೂ ಇಂಥದ್ದೆ ಪ್ರಾಂತ್ಯಕ್ಕೆ ಸೇರಿರುವ ಊರು ಎಂಬುದನ್ನು ಕಥೆಯಲ್ಲಿ ಹೇಳಿಲ್ಲ. ಈ ಊರಿನಲ್ಲಿ ನಡೆಯುವ ಒಂದಷ್ಟು ವಿಸ್ಮಯಕಾರಿ ಘಟನೆಗಳೇ ಚಿತ್ರದ ಒಟ್ಟಾರೆ ಕಥೆ. ಮೊದಲಿಗೆ ಹಾರರ್ ಸಿನಿಮಾವಿರಬಹುದು ಎನಿಸಿದರೂ ಹಲವು ತಿರುವುಗಳನ್ನು ಪಡೆದುಕೊಳ್ಳುವ ಕಥೆ ಕೊನೆತನಕ ಕುತೂಹಲ ಉಳಿಸಿಕೊಳ್ಳುತ್ತದೆ.

ಕಥೆಯ ನಾಯಕ ವಿಕ್ರಮ್ ಅಡಿಗ ಒಂದು ಪುಸ್ತಕವನ್ನು ಹುಡುಕಿಕೊಂಡು ‘ಘಾರ್ಗಾ’ದ ಗಜಾನನ ಐತಾಳರ ಮನೆಗೆ ಬರುತ್ತಾನೆ. ಪ್ರಾರಂಭದಲ್ಲಿ ಇದು ಈ ರೀತಿಯ ಕಥೆಯಾಗಿರಬಹುದೆಂಬ ಯಾವ ಸುಳಿವೂ ಸಿಗುವುದಿಲ್ಲ. ಆದರೆ ಈ ಊರಿಗೆ ಬರುವ ದಾರಿಯಲ್ಲಿ ನಡೆಯುವ ಒಂದಷ್ಟು ಘಟನೆಗಳಿಂದ ಇದೊಂದು ಹಾರರ್ ಸಿನಿಮಾವಿರಬಹುದೆಂಬ ಊಹೆ ಶುರುವಾಗುತ್ತದೆ. ಪ್ರೇಕ್ಷಕರನ್ನು ಭಯಗೊಳಿಸುವ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ.

ಚಿತ್ರದ ಇಡೀ ಕಥೆ ನಡೆಯುವುದು ಗಜಾನನ ಐತಾಳರ ಮನೆಯಲ್ಲಿ. ಗಜಾನನ ಐತಾಳರ ತಂದೆ ಮಹಾಬಲ ಐತಾಳರು ಸಾಹಿತಿಯಾಗಿರುತ್ತಾರೆ. ಅವರು ಬರೆದ ಪುಸ್ತಕವೊಂದನ್ನು ಹುಡುಕಿಕೊಂಡು ನಾಯಕ ಅಲ್ಲಿಗೆ ಬಂದಿರುತ್ತಾನೆ. ಐತಾಳರ ಮನೆ, ಪರಿಸರ, ಅಲ್ಲಿನ ಪಾತ್ರಗಳ ಪರಿಚಯಕ್ಕೆ ನಿರ್ದೇಶಕ ತುಸು ಸಮಯ ತೆಗೆದುಕೊಳ್ಳುತ್ತಾರೆ. ಭಯದ ಸನ್ನಿವೇಶಗಳ ಜತೆ ಒಂದಷ್ಟು ಹಾಸ್ಯವನ್ನು ಬೆರೆಸಿ ಮೊದಲಾರ್ಧ ಮುಗಿಯುವ ಹೊತ್ತಿಗೆ ಕಥೆಗೊಂದು ಒಳ್ಳೆಯ ತಿರುವು ಸಿಕ್ಕಿರುತ್ತದೆ.

ಗಜಾನನ ಐತಾಳರಾಗಿ ನಟಿಸಿರುವ ಸಾಯಿಕುಮಾರ್ ಇಡೀ ಚಿತ್ರದ ಶಕ್ತಿ. ಅವರಿಗೆ ಚಿತ್ರದ ನಾಯಕನಿಗಿಂತ ಹೆಚ್ಚು ಪ್ರಾಮುಖ್ಯ ನೀಡಿರುವುದು ಚಿತ್ರದ ಸಣ್ಣಪುಟ್ಟ ಲೋಪಗಳನ್ನು ಮರೆಮಾಚುತ್ತದೆ. ಕುಂದಾಪುರ ಕಡೆಯ ಕೃಷಿಕನಾಗಿ ಸಾಯಿಕುಮಾರ್ ಪಾತ್ರವನ್ನು ಜೀವಿಸಿದ್ದಾರೆ. ಪಾತ್ರ ಪೋಷಣೆಯೂ ಬಹಳ ಸೊಗಸಾಗಿದೆ. ಸಾಯಿಕುಮಾರ್ ಅವರನ್ನು ರಗಡ್, ಖಡಕ್ ಪಾತ್ರಗಳಲ್ಲಿ ನೋಡಿದವರಿಗೆ ಇಲ್ಲೊಂದು ಅಚ್ಚರಿಯಿದೆ. ಅದನ್ನು ಚಿತ್ರದಲ್ಲಿಯೇ ನೋಡಬೇಕು. ವಿಕ್ರಮ್ ಅಡಿಗನಾಗಿ ಅರುಣ್ ರಾಮಪ್ರಸಾದ್ ಅವರದ್ದು ಮೊದಲ ಸಿನಿಮಾ ಎನ್ನಿಸುವುದಿಲ್ಲ.

ಮೊದಲಿಗೆ ಅತಿಯಾದ ಹಾಸ್ಯದಿಂದ ಹಿಂಸೆ ಎನಿಸುವ ಅರುಣ್ ಸಾಗರ್ ಪಾತ್ರ ಕೂಡ ಒಳ್ಳೆಯ ತಿರುವು ಪಡೆದುಕೊಳ್ಳುತ್ತದೆ. ಹೀಗಾಗಿ ಚಿತ್ರದ ಮೊದಲಾರ್ಧ ಮುಗಿದಿದ್ದೇ ತಿಳಿಯುವುದಿಲ್ಲ. ಆದರೆ ದ್ವಿತೀಯಾರ್ಧದ ಕಥೆಯನ್ನು ಸ್ವಲ್ಪ ಬಿಗಿಗೊಳಿಸುವ ಅವಕಾಶ ನಿರ್ದೇಶಕರಿಗಿತ್ತು. ಎಐ ದೃಶ್ಯಗಳನ್ನು ಬಳಸಿಕೊಂಡು ಪುರಾಣದ ಕಥೆಯನ್ನು ಮುಖ್ಯಕಥೆಯಲ್ಲಿ ಸೇರಿಸುವ ಸನ್ನಿವೇಶಗಳನ್ನು ಅರ್ಧದಷ್ಟು ಕತ್ತರಿಸಿದ್ದರೆ ದ್ವಿತೀಯಾರ್ಧವೂ ವೇಗ ಪಡೆಯುತ್ತಿತ್ತು. ಗುರುಕಿರಣ್ ಹಿನ್ನೆಲೆ ಸಂಗೀತ ಸನ್ನಿವೇಶಗಳಿಗೆ ಸೂಕ್ತವಾಗಿದ್ದರೂ, ಭಯಮೂಡಿಸಲೆಂದು ನೀಡಿರುವ ಹಿನ್ನೆಲೆ ಸಂಗೀತದ ಅಬ್ಬರ ಸ್ವಲ್ಪ ಕಡಿಮೆಯಾಗಬಹುದಿತ್ತು.

ನೋಡಬಹುದಾದ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.