ರವಿ, ಅಪ್ಸರ ಬಹಳ ಪ್ರೀತಿಯಿಂದ ಬದುಕುತ್ತಿದ್ದ ಜೋಡಿ. ಉದ್ಯಮಿಯಾಗಿರುವ ರವಿ ಎಲ್ಲರನ್ನೂ ಸುಲಭವಾಗಿ ನಂಬುವಷ್ಟು ಒಳ್ಳೆಯವನು. ಈ ಒಳ್ಳೆಯತನವೇ ವೈಯಕ್ತಿಕ ಜೀವನಕ್ಕೆ ಮುಳುವಾಗುತ್ತದೆ. ನಂಬಿಕೆ, ಅಪನಂಬಿಕೆಗಳ ಸುತ್ತಲಿನ ಕಥೆಯನ್ನು ಹೊಂದಿರುವ ಚಿತ್ರವಿದು. ಈ ಕಥೆ ಹೇಳಲು ಬಳಸಿರುವ ವಿಧಾನ ಅತ್ಯಂತ ಪೇಲವವಾಗಿದೆ. ಹಸಿಬಿಸಿ ಸನ್ನಿವೇಶಗಳಿದ್ದರೆ ಜನ ಬರುತ್ತಾರೆ ಎಂಬ ಹದಿನೈದು ವರ್ಷಗಳ ಹಿಂದಿನ ನಂಬಿಕೆಗೆ ನಿರ್ದೇಶಕರು ಜೋತು ಬಿದ್ದಂತೆ ಕಾಣುತ್ತದೆ. ಕಥೆಗೆ ಅಗತ್ಯವೇ ಇಲ್ಲದ ಇಂಥ ದೃಶ್ಯಗಳು ಒಂದು ಹಂತದಲ್ಲಿ ಕಿರಿಕಿರಿ ಮೂಡಿಸುತ್ತವೆ.

ಕಥೆಯ ಎಳೆಯನ್ನು ಗಟ್ಟಿಯಾಗಿ ಕಟ್ಟಿಕೊಡುವ ಯತ್ನ ಇಡೀ ಸಿನಿಮಾದುದ್ದಕ್ಕೂ ಆಗಿಲ್ಲ. ಮೊದಲಾರ್ಧದಲ್ಲಿ ನಾಯಕ ರವಿ, ಖಳನಾಯಕ ವರುಣ್ ಪಾತ್ರಗಳ ಪರಿಚಯದಲ್ಲಿಯೇ ಮುಗಿದು ಹೋಗುತ್ತದೆ. ಇಂಟರ್ವಲ್ನವರೆಗೂ ಸಿನಿಮಾ ಕಥೆ ಏನಾಗಿರಬಹುದು? ಚಿತ್ರದಲ್ಲಿ ಏನು ನಡೆಯುತ್ತಿದೆ ಎಂಬದನ್ನು ಊಹಿಸಲೂ ಸಾಧ್ಯವಾಗುವುದಿಲ್ಲ! ಹಾಗಂತ ಪಾತ್ರಗಳಲ್ಲಿಯೂ ಗಟ್ಟಿತನವಿಲ್ಲ. ರವಿಯಾಗಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ. ಒಳ್ಳೆಯವ, ಬೇರೆಯವರು ಮೋಸ ಮಾಡಿದ್ದು ಗೊತ್ತಾಗುವುದಿಲ್ಲ, ಎಲ್ಲರಿಗೂ ಸಹಾಯ ಮಾಡುವವನು ಎಂಬುದನ್ನು ನಿರೂಪಿಸುವ ದೃಶ್ಯಗಳೇ ಹೆಚ್ಚಿವೆ. ಅಪ್ಸರ ಆಗಿ ನಿಖಿತಾ ಸ್ವಾಮಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ಹಸಿಬಿಸಿ ದೃಶ್ಯಗಳಿಗೆ ಸೀಮಿತವಾಗಿದೆ. ಖಳನಾಯಕ ವರುಣ್ ಆಗಿ ಸುಮನ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಕಣ್ಣಿಗೆ ಬೀಳುವ ಹುಡುಗಿಯರನ್ನೆಲ್ಲ ಬುಟ್ಟಿಗೆ ಹಾಕಿಕೊಳ್ಳುವುದೇ ಈ ಪಾತ್ರದ ಕೆಲಸ.

ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋದಾಗ ನಾಯಕ ರವಿ ಕಾಲುಜಾರಿ ಬೀಳುತ್ತಾನೆ. ಅದು ಕೊಲೆ ಯತ್ನ ಎಂಬುದು ನಂತರ ಗೊತ್ತಾಗುತ್ತದೆ. ಬಹಳ ಪ್ರೀತಿಯಿಂದಿರುವ ಪತ್ನಿ ಅಪ್ಸರಾಳೆ ಗಂಡನಿಗೆ ಮೋಸ ಮಾಡುತ್ತಾಳೆ. ಏಕೆ ಮತ್ತು ಇದರ ನಂತರ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ದ್ವಿತೀಯಾರ್ಧ. ಪಾತ್ರಗಳೇ ಗಟ್ಟಿಯಿಲ್ಲದೇ ಪಾತ್ರಧಾರಿಗಳ ನಟನೆಯೂ ಪೇಲವ ಅನ್ನಿಸುತ್ತದೆ. ಪೊಲೀಸ್ ಅಧಿಕಾರಿ ಹಾಗೂ ನಾಯಕನ ಸ್ನೇಹಿತವಾಗಿ ನಾಗೇಂದ್ರ ಅರಸ್, ಖಳನಟನಾಗಿ ಕೋಟೆ ಪ್ರಭಾಕರ್ ಗಮನ ಸೆಳೆಯುತ್ತಾರೆ. ಆದರೆ ಅವರ ಪಾತ್ರಕ್ಕೆ ಹೆಚ್ಚು ತೆರೆಯ ಅವಧಿಯಿಲ್ಲ.

ಸಿನಿಮಾದಲ್ಲಿ ಅದ್ದೂರಿತನಕ್ಕೆ ಕೊರತೆಯಿಲ್ಲ. ಪಾರ್ಟಿ, ಆಫೀಸ್, ಮನೆ ದೃಶ್ಯಗಳನ್ನು ಛಾಯಾಚಿತ್ರಗ್ರಾಹಕ ಪಿ.ಕೆ.ಎಚ್. ದಾಸ್ ವರ್ಣರಂಜಿತವಾಗಿಸಿದ್ದಾರೆ. ಆದರೆ ಸಾಕಷ್ಟು ಭಾಗಗಳಲ್ಲಿ ಹಿನ್ನೆಲೆ ಸಂಗೀತ ಕಥೆಗೆ ಪೂರಕವೆನಿಸುವುದಿಲ್ಲ. ಕೆಲವು ಕಡೆ ಇದ್ದಕ್ಕಿದ್ದಂತೆ ಹಿನ್ನೆಲೆ ಸಂಗೀತ ಮುಗಿದು ಹೋಗುತ್ತದೆ. ಹೇಳುತ್ತಿರುವುದು ಯಾವ ಜಾನರ್ನ ಕಥೆ ಮತ್ತು ಇದನ್ನು ಯಾವ ರೀತಿ ಹೇಳಬೇಕೆಂಬ ಸ್ಪಷ್ಪತೆ ನಿರ್ದೇಶಕರಲ್ಲಿ ಇಲ್ಲದಿರುವುದು ಚಿತ್ರದುದ್ದಕ್ಕೂ ಕಾಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.