ಶನಿವಾರ, ಸೆಪ್ಟೆಂಬರ್ 18, 2021
24 °C

ಸಿಗರೇಟ್ ಪ್ಯಾಕ್‌ನಿಂದಾಗಿ ಟ್ರೋಲ್‌ಗೆ ಒಳಗಾದ ಇರಾ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Ira Khan Instagram Post

ಬೆಂಗಳೂರು: ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಚಿತ್ರವೊಂದರಿಂದ ಟ್ರೋಲ್‌ಗೆ ಒಳಗಾಗಿದ್ದಾರೆ.

ಹಿಮಾಚಲ ಪ್ರದೇಶಕ್ಕೆ ಗೆಳೆಯನ ಜತೆ ತೆರಳಿದ್ದ ಇರಾ ಖಾನ್, ಗುಡ್ ಮಾರ್ನಿಂಗ್ ಎಂಬ ಅಡಿಬರಹ ನೀಡಿ, ಫೋಟೊ ಒಂದನ್ನು ಪೋಸ್ಟ್ ಮಾಡಿದ್ದರು.

ಪುಟ್ಟ ನಾಯಿಯೊಂದನ್ನು ಹಿಡಿದುಕೊಂಡು ಕುಳಿತಿದ್ದ ಚಿತ್ರ ಅದಾಗಿತ್ತು. ಜತೆಗೆ ಅದರಲ್ಲಿ ಇರಾ ಪಕ್ಕದಲ್ಲಿ ಸಿಗರೇಟ್ ಪ್ಯಾಕ್ ಮತ್ತು ಲೈಟರ್ ಕೂಡ ಇತ್ತು.

ಇರಾ ಚಿತ್ರವನ್ನು ಗಮನಿಸಿದ ಕೆಲವರು, ನೀವು ಯಾವ ಬ್ರ್ಯಾಂಡ್‌ನ ಸಿಗರೇಟ್ ಸೇದುತ್ತೀರಿ ಎಂದೆಲ್ಲ ಪ್ರಶ್ನಿಸಿದ್ದಾರೆ.

ಮತ್ತೋರ್ವ, ಸೆಲೆಬ್ರಿಟಿ ಮಕ್ಕಳು ಯಾಕೆ ಸರಿಯಾದ ರೀತಿಯಲ್ಲಿ ವಸ್ತ್ರ ಧರಿಸುವುದಿಲ್ಲ ಎಂದು ಕೇಳಿದ್ದಾರೆ. ಹೀಗೆ ಕೆಲವರು ಇರಾ ಫೋಟೊವನ್ನು ಟ್ರೋಲ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು