ಭಾನುವಾರ, ಸೆಪ್ಟೆಂಬರ್ 26, 2021
25 °C

ವಿಡಿಯೊ ನೋಡಿ: ಕಬಿನಿಯಲ್ಲಿ ಚಿರತೆ ‘ಸೆರೆ‘ ಹಿಡಿದ ನಟ ಗಣೇಶ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಪ್ರವಾಸದ ಗುಂಗಿನಲ್ಲಿದ್ದು, ಅವರು ತಮ್ಮ ಮಕ್ಕಳ ಜೊತೆ ಕಬಿನಿ ಅರಣ್ಯ ಸಫಾರಿಯ ಸೊಬಗು ಸವಿಯುತ್ತಿದ್ದಾರೆ.

ಪ್ರವಾಸ ಪ್ರಿಯರು ಆಗಿರುವ ಗಣೇಶ್ ದೇಶ–ವಿದೇಶದಲ್ಲಿ ಅನೇಕ ಪ್ರವಾಸಗಳನ್ನು ಕಂಡಿದ್ದಾರೆ. ಇದೀಗ ಅವರು ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರು ಅರಣ್ಯದಲ್ಲಿ ಪ್ರವಾಸ ಕೈಗೊಂಡು ತಮ್ಮ ಮಕ್ಕಳಿಗೆ ಪೃಕೃತಿ ಪಾಠ ಹೇಳಿಕೊಡುತ್ತಿದ್ದಾರೆ.

ಸಫಾರಿ ಮಾಡುವ ವೇಳೆ ಕಬಿನಿ ಅರಣ್ಯದ ಚಿರತೆಯೊಂದು ಗಣೇಶ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಂಭಿರ್ಯದಿಂದ ಕಾಡಲ್ಲಿ ಅಲೆದಾಡುತ್ತಿದ್ದ ಸುಂದರ ಚಿರತೆಯೊಂದು ಗಣೇಶ್ ಅವರ ಸಫಾರಿ ಕಾರ್‌ಗೆ ಅಡ್ಡಲಾಗಿ ಬಂದಾಗ ಅದನ್ನು ನೋಡಿ ಗಣೇಶ್ ಹಾಗೂ ಅವರ ಮಕ್ಕಳು ಬೆರಗಾಗಿದ್ದಾರೆ.

ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಕುಟುಂಬದ ಜೊತೆ ಸಂತೋಷದ ಕ್ಷಣಗಳನ್ನು ಕಬಿನಿಯಲ್ಲಿ ಕಳೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

 

ಕಳೆದ ಎರಡು ವರ್ಷದಿಂದ ಕೊರೊನಾ ಹಾವಳಿಯಿಂದಾಗಿ ಗಣೇಶ್ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಗೀತಾ ಅವರ ಕೊನೆ ಸಿನಿಮಾ. ಸದ್ಯ ತ್ರಿಬಲ್ ರೈಡಿಂಗ್, ಸಕತ್, ಗಾಳಿಪಟ 2 ಹಾಗೂ ದಿ ಸ್ಟೋರಿ ಆಫ್ ರಾಯಗಢ್ ಸಿನಿಮಾಗಳಲ್ಲಿ ಸದ್ಯಕ್ಕೆ ತೊಡಗಿಸಿಕೊಂಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಅವರು ಕಿರುತೆರೆ ರಿಯಾಲಿಟಿ ಶೋಗಳಿಂದ ಗಣೇಶ್ ದೂರ ಇದ್ದರು. ಇದೀಗ ಮತ್ತೊಂದು ಕಿರುತೆರೆ ರಿಯಾಲಿಟಿ ಶೋ ಮೂಲಕ ಪ್ರವೇಶ ಮಾಡುತ್ತಿದ್ದಾರೆ.

ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ಅವರು, ‘ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ರಿಯಾಲಿಟಿ ಶೋ ಒಂದನ್ನು ನಡೆಸಿ ಕೊಡಲು ಶೀಘ್ರದಲ್ಲೇ ಬರುತ್ತಿದ್ದೇನೆ’ ಎಂದು ಪ್ರೋಮೊವನ್ನು ಹಂಚಿಕೊಂಡಿದ್ದಾರೆ. ಆದರೆ, ಕಾರ್ಯಕ್ರಮ ಏನು? ಎಂಬುದರ ಬಗ್ಗೆ ಗುಟ್ಟು ಕಾಪಾಡಿಕೊಂಡಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ: ಗಣಪನ ಆಗಮನ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು