ಭಾನುವಾರ, ಜೂನ್ 26, 2022
28 °C

ಫ್ಯಾಮಿಲಿ ಮ್ಯಾನ್‌: ಟ್ವಿಟ್ಟರ್‌ನಲ್ಲಿ ಅಮೆಜಾನ್ ಪ್ರೈಮ್- ನೆಟ್‌ಫ್ಲಿಕ್ಸ್ ಫೈಟ್!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡ ಮನೋಜ್ ಭಾಜಪೇಯಿ ಪ್ರಧಾನ ಭೂಮಿಕೆಯ ಫ್ಯಾಮಿಲಿ ಮ್ಯಾನ್ 2 ಸರಣಿಗೆ ಜನರು ಪ್ರಶ‌ಂಸೆ ವ್ಯಕ್ತಪಡಿಸಿದ್ದಾರೆ.

ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡ ಫ್ಯಾಮಿಲಿ ಮ್ಯಾನ್ 2 ಸರಣಿ ಬಳಿಕ ನಟ ಮನೋಜ್ ಭಾಜಪೇಯಿಗೆ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ.

ನೆಟ್‌ಫ್ಲಿಕ್ಸ್ ಇಂಡಿಯಾ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಮನೋಜ್ ಭಾಜಪೇಯಿಗೆ ಸರಣಿಗೆ ಸ್ವಾಗತ ಎಂದು ವೆಲ್‌ಕಮ್ ಮಾಡಲಾಗಿದೆ.

ಈ ಟ್ವೀಟ್‌ಗೆ ನಟ ಮನೋಜ್ ಭಾಜಪೇಯಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಸ್ವಾಗತಕ್ಕೆ ಧನ್ಯವಾದ ಎಂದಿದ್ದಾರೆ.

ಆದರೆ ಇವರಿಬ್ಬರ ಟ್ವೀಟ್ ಗಮನಿಸಿದ ಅಮೆಜಾನ್ ಪ್ರೈಮ್, ತನ್ನ ಅಮೆಜಾನ್ ಪ್ರೈಮ್ ವಿಡಿಯೊ ಇನ್ ಖಾತೆಯಲ್ಲಿ ಮನೋಜ್ ಭಾಜಪೇಯಿಯನ್ನು ಉದ್ದೇಶಿಸಿ, ಶ್ರೀಕಾಂತ್, ಕೆಲಸ ಬದಲಾಯಿಸುವುದರಿಂದ ದೊಡ್ಡ ಬದಲಾವಣೆಯಾಗುತ್ತದೆ ಅಲ್ಲವೇ ಎಂದು ಟ್ವೀಟ್ ಮಾಡಿದೆ.

ಅಮೆಜಾನ್ ಟ್ವೀಟ್‌ಗೆ ನಟ ಮನೋಜ್ ಪ್ರತಿಕ್ರಿಯಿಸಿದ್ದು, ಹಾಹಾ, ಇದು ಟಾಪ್ ಕ್ಲಾಸ್ ಆಗಿದೆ, ನಾನು ಕೆಲಸ ಬದಲಾಯಿಸುತ್ತಿಲ್ಲ, ಪಾತ್ರ ಮಾತ್ರ ಬದಲಾಗುತ್ತಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು