ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾನೂಗೆ ಅವಕಾಶಗಳ ಮಹಾಪೂರ

Last Updated 4 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ತೇರಿ ಮೇರಿ ಕಹಾನಿ’ ಮೂಲಕ ರಾನೂ ಮಂಡಲ್‌ಗೆ ಬ್ರೇಕ್‌ ನೀಡಿದ್ದ ಗಾಯಕ ಹಿಮೇಶ್ ರೇಷಮಿಯಾ ಮುಂಬರುವ‘ಹ್ಯಾಪಿ ಹಾರ್ಡಿ ಆ್ಯಂಡ್‌ ಹೀರ್‌’ ಚಿತ್ರಕ್ಕಾಗಿ ಮೂರನೇ ಹಾಡು ಹಾಡಲು ಆಫರ್ ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳದ ರಾಣಾಘಾಟ್‌ ರೈಲ್ವೆ ಪ್ಲಾಟ್‌ಫಾರಂನಿಂದ ಏಕಾಏಕಿ ಬಾಲಿವುಡ್‌ ಪ್ರವೇಶಿಸಿದ ಗಾಯಕಿ ರಾನೂ ಮಂಡಲ್‌ ಅವರುಹಿಮೇಶ್ ರೇಷಮಿಯಾ ಅವರೊಂದಿಗೆ ಈಗಾಗಲೇ ‘ತೇರಿ ಮೇರಿ ಕಹಾನಿ’ ಮತ್ತು ’ಆದತ್‌’ ಎಂಬ ಹಾಡಿಗೆ ಧ್ವನಿಯಾಗಿದ್ದಾರೆ. ‘36 ಚೈನಾ ಟೌನ್‌‘ ಚಿತ್ರದ ‘ಆಶಿಕಿ ಮೈ ತೇರಿ’ ಎಂಬ ಹಾಡನ್ನು ಹಿಮೇಶ್‌ ಜತೆ ರಾನೂ ಹಾಡುತ್ತಿದ್ದಾರೆ.

ರಾಣಾಘಾಟ್ ರೈಲ್ವೆ ಫ್ಲಾಟ್‌ಫಾರಂನಲ್ಲಿ ಕುಳಿತು ಆತ್ಮತೃಪ್ತಿಗಾಗಿ ರಾನೂ ಹಾಡಿದ್ದ ‘ಏಕ್‌ ಪ್ಯಾರ್‌ ಕಾ ನಗ್ಮಾ ಹೈ’ ಎಂಬ ಹಾಡನ್ನು ಅತೀಂದ್ರ ಚಕ್ರವರ್ತಿ ಎಂಬುವವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಮೇಲೆ ಕಮರಿ ಹೋಗಬೇಕಿದ್ದ ಪ್ರತಿಭೆ ಸಾಮಾಜಿಕ ಜಾಲತಾಣದಿಂದಾಗಿ ಬೆಳಕಿಗೆ ಬಂದಿತು. ರಾನೂ ಇಂಪಾದ ಧ್ವನಿಯಿಂದ ರಾತ್ರೋರಾತ್ರಿ ದೇಶದ ಉದ್ದಗಲಕ್ಕೆ ಮನೆಮಾತಾದರು. ಅವರ ಪ್ರತಿಭೆಯನ್ನು ಗುರುತಿಸಿದ ಹಿಮೇಶ್‌ ರೇಷಮಿಯಾ ನೀಡಿದ ಅವಕಾಶದಿಂದ ಸ್ಟಾರ್‌ ಗಾಯಕಿಯಾದರು.

ಅಂದಹಾಗೆ, ರಾನೂ ಮಂಡಲ್‌ ಅವರು ಮುಂಬೈನ ನೈಟ್‌ಕ್ಲಬ್‌ನಲ್ಲಿ ಹಾಡುತ್ತಿದ್ದರು. ಕ್ಲಬ್‌ನಲ್ಲಿ ಡ್ರಮ್ಮರ್‌ ಆಗಿದ್ದ ಮಂಡಲ್‌ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪತಿ ಅಕಾಲಿಕ ಮರಣದ ನಂತರ ಪಶ್ಚಿಮ ಬಂಗಾಳಕ್ಕೆ ಹಿಂದಿರುಗಿದ್ದರು. ಮಕ್ಕಳು ಅವರನ್ನು ಮನೆಯಿಂದ ಹೊರ ಹಾಕಿದ ನಂತರ ನಿರ್ಗತಿಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT