ಮಂಗಳವಾರ, ಮಾರ್ಚ್ 21, 2023
20 °C

ತೆಲುಗು ಬಿಗ್‌ಬಾಸ್‌: ಟ್ರೋಫಿ ಎತ್ತಿ ಹಿಡಿದ ಗಾಯಕ ರೇವಂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ‘ತೆಲುಗು ಬಿಗ್‌ಬಾಸ್‌ ಸೀಸನ್ 6’ರ ಟ್ರೋಫಿಯನ್ನು ಗಾಯಕ ಎಲ್.ವಿ.ರೇವಂತ್ ಎತ್ತಿ ಹಿಡಿದಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ರೇವಂತ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಟ್ರೋಫಿ ಜತೆಗೆ ₹ 10 ಲಕ್ಷ ನಗದು, ಒಂದು ಕಾರು ಹಾಗೂ ₹ 25 ಲಕ್ಷ ಮೌಲ್ಯದ ಪ್ರಾಪರ್ಟಿಯನ್ನು ಬಹುಮಾನವಾಗಿ ಪಡೆದರು.

ರೇವಂತ್, ಶ್ರೀಹಾನ್, ಆದಿ ರೆಡ್ಡಿ, ಕೀರ್ತಿ ಭಟ್ ಹಾಗೂ ರೋಹಿತ್ ಸಾಹ್ನಿ ಫಿನಾಲೆ ತಲುಪಿದ್ದರು. ಇವರಲ್ಲಿ ರೇವಂತ್‌ ಹೆಚ್ಚು ಮತ ಪಡೆದಿದ್ದರು.

ಈ ಸೀಸನ್‌ ಅಲ್ಲಿ ಒಟ್ಟು 21 ಸ್ಪರ್ಧಿಗಳು ಮನೆ ಸೇರಿದ್ದರು. ಅಕ್ಕಿನೇನಿ ನಾಗಾರ್ಜುನ ಬಿಗ್‌ಬಾಸ್‌ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದರು.

ಫಿನಾಲೆಯಲ್ಲಿ ನಟ ರವಿ ತೇಜಾ, ನಿಖಿಲ್ ಸಿದ್ದಾರ್ಥ್, ನಟಿ ಶ್ರೀಲೀಲಾ, ಹಿರಿಯ ನಟಿ ರಾಧಾ, ಬಾಲಿವುಡ್ ನಟಿ ಊರ್ವಶಿ ರೌಟೇಲಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ರೇವಂತ್ ಅವರು ‘ಕಾಫಿ ವಿಥ್ ಮೈ ವೈಫ್’ ಸಿನಿಮಾ ಸೇರಿ ಕೆಲವು ಕನ್ನಡದ ಹಲವು ಚಿತ್ರಗಳಲ್ಲಿ ಹಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು